ಬೆಂಗಳೂರು:ಮೇ-28: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮತದಾನ ಆರಂಭಗೊಂಡಿದೆ. ಸರಕಾರ ರಚನೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಚುನಾವಣೆಯಲ್ಲಿ ತೀವ್ರ ಹಣಾಹಣಿಗಿಳಿದಿವೆ. ಇನ್ನು, ದೋಸ್ತಿ ಪಕ್ಷಗಳ ಕಲಹದ ಲಾಭ ಪಡೆದು ಸರಕಾರಕ್ಕೆ ಮೊದಲ ಮುಖಭಂಗ ಉಂಟು ಮಾಡಲು ಬಿಜೆಪಿ ಕೂಡ ಹಠಕ್ಕೆ ಬಿದ್ದಿದೆ. ಇದರಿಂದ ಮೂರು ಪಕ್ಷಗಳಿಗೂ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.
ಕಾಂಗ್ರೆಸ್ನಿಂದ ಮುನಿರತ್ನ, ಬಿಜೆಪಿಯಿಂದ ತುಳಸಿ ಮುನಿರಾಜುಗೌಡ ಹಾಗೂ ಜೆಡಿಎಸ್ನಿಂದ ಜಿ.ಎಚ್. ರಾಮಚಂದ್ರ ಅವರು ಕಣದಲ್ಲಿದ್ದಾರೆ.
ಜಾಲಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ 9 ಸಾವಿರಕ್ಕೂ ಅಧಿಕ ಅಸಲಿ ಮತದಾರರ ಗುರುತಿನ ಚೀಟಿಗಳು ದೊರೆತ ಹಿನ್ನೆಲೆಯಲ್ಲಿ ಮೇ 12ರಂದು ನಡೆಯಬೇಕಿದ್ದ ಚುನಾವಣೆಯನ್ನು ಚುನಾವಣಾ ಆಯೋಗ 28ಕ್ಕೆ ಮುಂದೂಡಿತ್ತು. ಈ ಹಿನ್ನಲೆಯಲ್ಲಿ ಇಂದು ಮತದಾನ ನಡೆಯುತ್ತಿದೆ.