ಪಿಎಫ್ ಬಡ್ಡಿದರವನ್ನು ಶೇ.8.55ಕ್ಕೆ ನಿಗದಿಗೊಳಿಸುವ ಶಿಫಾರಸಿಗೆ ಸರ್ಕಾರ ಅನುಮೋದನೆ

ನವದೆಹಲಿ, ಮೇ 26-ಕಾರ್ಮಿಕರ ಭವಿಷ್ಯ ನಿಧಿ(ಪ್ರಾವಿಡೆಂಟ್ ಫಂಡ್) ಮೇಲೆ 2017-18ನೇ ಸಾಲಿಗೆ ಶೇ.8.55ರಷ್ಟು ಬಡ್ಡಿದರವನ್ನು ನಿಗದಿಗೊಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಪಿಎಫ್ ಬಡ್ಡಿದರವನ್ನು ಶೇ.8.55ಕ್ಕೆ ನಿಗದಿಗೊಳಿಸುವ ಶಿಫಾರಸಿಗೆ ಸರ್ಕಾರ ಅನುಮೋದನೆ ನೀಡಿರುವುದಾಗಿ ಕಾರ್ಮಿಕ ಸಚಿವಾಲಯ ತಿಳಿಸಿದೆ.
ಕಳೆದ ಐದು ವರ್ಷಗಳಲ್ಲೇ ಪಿಎಫ್ ಮೇಲೆ ನಿಗದಿಯಾಗಿರುವ ಅತ್ಯಂತ ಕಡಿಮೆ ಬಡ್ಡಿ ದರ ಇದಾಗಿದೆ.
ಪಿಎಫ್‍ಗೆ ಶೇ.55ರಷ್ಟು ಬಡ್ಡಿ ದರ ನಿಗದಿಗೊಳಿಸುವ ಸೂಚನೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿ ಕಚೇರಿ(ಇಪಿಎಫ್‍ಒ) ತನ್ನ 120ಕ್ಕೂ ಹೆಚ್ಚು ಕ್ಷೇತ್ರಾಧಿಕಾರಿಗಳಿಗೆ ರವಾನಿಸಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಪಿಎಫ್ ಮೇಲೆ ಹೊಸ ಬಡ್ಡಿ ದರ ನಿಗದಿಗೊಳಿಸುವ ಸಲಹೆಯನ್ನು ಹಣಕಾಸು ಸಚಿವಾಲಯ ಅಂಗೀಕರಿಸಿತ್ತು.
2016-17ನೇ ಸಾಲಿನಲ್ಲಿ ಪಿಎಫ್ ಬಡ್ಡಿ ದರವನ್ನು ಶೇ.8.66ರಷ್ಟು ನಿಗದಿಗೊಳಿಸಲಾಗಿತ್ತು. ಅದಕ್ಕೂ ಹಿಂದಿನ ಹಣಕಾಸು ವರ್ಷಗಳಲ್ಲಿ ಬಡ್ಡಿ ದರ ಕ್ರಮವಾಗಿ ಶೇ.8.8, ಶೇ.8.75, ಶೇ.65ರಷ್ಟಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ