ಲಷ್ಕರ್-ಎ-ತೈಬಾ ಉಗ್ರಗಾಮಿ ಸಂಘಟನೆ ಮತ್ತೆ ಚುರುಕಾಗಿದೆ:

ನವದೆಹಲಿ, ಮೇ 23-ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೈಬಾ ಉಗ್ರಗಾಮಿ ಸಂಘಟನೆ ಮತ್ತೆ ಚುರುಕಾಗಿದೆ. ಇದರ ವಿದ್ಯಾರ್ಥಿ ಘಟಕ ಅಲ್ ಮಹಮದೀಯ ಸ್ಟೂಡೆಂಟ್ಸ್(ಎಎಂಎಸ್) ಚಟುವಟಿಕೆಗಳು ತೀವ್ರಗೊಂಡಿದ್ದು, ಪರಸ್ಪರ ಸಂವಹನಕ್ಕಾಗಿ ಜಾಡುಪತ್ತೆಯಾಗದ ಅತ್ಯಾಧುನಿಕ ಮೊಬೈಲ್ ಹ್ಯಾಂಡ್‍ಸೆಟ್‍ನನ್ನು ಅಭಿವೃದ್ದಿಗೊಳಿಸಲಾಗಿದೆ.
ಟೆಲಿಕಾಂ ಸರ್ವಿಸ್ ಪೆÇ್ರವಡರ್ ಅಗತ್ಯವಿಲ್ಲದಂತೆ ಚಿಪ್ ತಂತ್ರಜ್ಞಾನ ಬಳಸಿ ಹತ್ತಿರದ ಸಿಗ್ನಲ್ ಜೊತೆ ಸಂಪರ್ಕ ಸಾಧಿಸುವ ತಂತ್ರಜ್ಞಾನ ಇದಾಗಿದ್ದು, ಮೊಬೈಲ್ ಕರೆ ಮಾಡಿದ ಮತ್ತು ಕರೆ ಸ್ವೀಕರಿಸಿದವರ ಮಾಹಿತಿ ಲಭ್ಯವಾಗುವುದಿಲ್ಲ. ಇದು ಎಲ್‍ಇಟಿಗೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂವಹನಕ್ಕಾಗಿ ಅನುಕೂಲವಾಗಲಿದೆ.
ಇದಲ್ಲದೇ ಎಲ್‍ಇಟಿ 450 ಯುವಕರನ್ನು ನೇಮಕ ಮಾಡಿಕೊಂಡು ಗುಪ್ತ ಸ್ಥಳದಲ್ಲಿ ಯುವ ಉಗ್ರರಿಗೆ ತರಬೇತಿ ನೀಡುತ್ತಿದೆ ಎಂಬ ಆತಂಕಕಾರಿ ಸಂಗತಿಯಲ್ಲಿ ಗುಪ್ತಚರ ಸಂಸ್ಥೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ