ಮಾರ್ಕೋನ ಹಳ್ಳಿ ಜಲಾಶಯ ವ್ಯಾಪ್ತಿಯಲ್ಲಿ ಅಕ್ರಮ ಮರಳು ವಶ:

ಕುಣಿಗಲ್, ಮೇ 23-ಮಾರ್ಕೋನ ಹಳ್ಳಿ ಜಲಾಶಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಂಗ್ರಹಿಸಿದ್ದ ಇಟ್ಟಿಗೆ ಕಾರ್ಖಾನೆಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮರಳು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಯಡಿಯೂರು ಹೋಬಳಿಯ ಕಗ್ಗೆರೆ ಹಾಗೂ ಸಿದ್ದಾಪುರ ಗ್ರಾಮದ ಇಟ್ಟಿಗೆ ಕಾರ್ಖಾನೆಯಲ್ಲಿ 12206 ಮೆಟ್ರಿಕ್ ಟನ್‍ನಷ್ಟು ಮರಳು ಶೇಖರಿಸಲಾಗಿತ್ತು.
ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಅಧಿಕಾರಿಗಳಾದ ಲೋಕೇಶ್ ಮತ್ತು ನವೀನ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಮರಳನ್ನು ವಶಕ್ಕೆ ಪಡೆದು ಇಟ್ಟಿಗೆ ಕಾರ್ಖಾನೆ ಮಾಲೀಕರ ವಿರುದ್ಧ ಅಮೃತೂರು ಪೆÇಲೀಸ್‍ಗೆ ಪತ್ರ ಬರೆಯುವ ಮೂಲಕ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ