ನವದೆಹಲಿ, ಮೇ 20-ನಿಮ್ಮ ಸೌಂದರ್ಯವರ್ಧಕಗಳಲ್ಲಿ ಸಸ್ಯಾಹಾರಿ ಅಥವಾ ಮಾಂಸಹಾರಿ ಮೂಲದ್ದೇ ಎಂಬುದು ನಿಮಗೆ ಶೀಘ್ರ ತಿಳಿಯಲಿದೆ. ಸೌಂದರ್ಯವರ್ಧಕಗಳು ಹಾಗೂ ಫೇಸ್ವಾಸ್, ಸೋಪುಗಳು, ಶಾಂಪೂಗಳು ಮತ್ತು ಟೂತ್ಪೇಸ್ಟ್ಗಳಂಥ ವಸ್ತುಗಳಲ್ಲಿ ವೆಜ್ ಅಥವಾ ನಾನ್ ವೆಜ್ ಅಂಶಗಳು ಇರುವ ಬಗ್ಗೆ ಮಾಹಿತಿ ನೀಡುವ ಗುರುತುಗಳನ್ನು ನೀವು ಪರಿಶೀಲಿಸಬಹುದು.
ಆಹಾರ ಉತ್ಪನ್ನಗಳ ಮೇಲೆ ಇರುವಂತೆ ಸೌಂದರ್ಯವರ್ಧಕಗಳ ಮೇಲೆ ಕಂದು/ಕೆಂಪು ಅಥವಾ ಹಸಿರು ಚುಕ್ಕಿ ಗುರುತುಗಳನ್ನು ಮಾಡಲಾಗುತ್ತದೆ. ಕಂದು/ಕೆಂಪು ಗುರುತು ಇದ್ದರೆ ಅದು ಮಾಂಸಾಹಾರಿ ಮೂಲದ್ದು ಹಾಗೂ ಹಸಿರು ಡಾಟ್ ಇದ್ದರೆ ಅದು ಸಸ್ಯಜನ್ಯದ್ದು ಎಂಬುದನ್ನು ತಿಳಿಯಬಹುದು. ಸದ್ಯದಲ್ಲೆ ಕಾಸ್ಮೆಟಿಕ್ಗಳ ಮೇಲೆ ಈ ಗುರುತುಗಳು ಕಾಣಿಸಿಕೊಳ್ಳಲಿವೆ. ಈ ಬಗ್ಗೆ ಔಷಧ ಸಲಹಾ ಮಂಡಳಿ ಡಿಟ್ಯಾಬ್ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.