ಛತ್ತೀಸ್‍ಗಢದ ದಂತೇವಾಡದಲ್ಲಿ ನಕ್ಸಲರ ಅಟ್ಟಹಾಸ:

ದಂತೇವಾಡ, ಮೇ 20-ಛತ್ತೀಸ್‍ಗಢದ ದಂತೇವಾಡದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಮಾವೋವಾದಿಗಳ ಪ್ರಾಬಲ್ಯ ಇರುವ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಬಂಡುಕೋರರು ನೆಲಬಾಂಬ್ ಸ್ಪೋಟಿಸಿ ಐವರು ಪೆÇಲೀಸರನ್ನು ಹತ್ಯೆ ಮಾಡಿದ್ದಾರೆ. ಈ ವಿಧ್ವಂಸಕ ಕೃತ್ಯದಲ್ಲಿ ಕೆಲವರು ಗಾಯಗೊಂಡಿದ್ಧಾರೆ.
ಭದ್ರತಾ ಸಿಬ್ಬಂದಿ ವಾಹನ ದಂತೇವಾಡ ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ಮಾವೋವಾದಿಗಳು ನೆಲಬಾಂಬ್ ಸ್ಪೋಟಿಸಿದರು. ಈ ದಾಳಿಯಲ್ಲಿ ಐವರು ಪೆÇಲೀಸರು ಹುತಾತ್ಮರಾದರು. ಕೆಲವು ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಕ್ಸಲರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆ ದಟ್ಟ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲು ಪೆÇಲೀಸರು ವಾಹನದಲ್ಲಿ ತೆರಳುತ್ತಿದ್ದಾಗ ನೆಲಬಾಂಬ್ ದಾಳಿ ನಡೆದಿದೆ.
ನಕ್ಸಲರ ಹಿಂಸಾಕೃತ್ಯದ ನಂತರ ಎಚ್ಚೆತ್ತ ಭದ್ರತಾ ಪಡೆ ನಕ್ಸಲರತ್ತ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಕೆಲಕಾಲ ಗುಂಡಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಮಾವೋವಾದಿಗಳು ಪರಾರಿಯಾದರು. ನಕ್ಸಲರಿಗಾಗಿ ಆ ಪ್ರದೇಶದಲ್ಲಿ ತೀವ್ರ ಶೋಧ ನಡೆಯುತ್ತಿದೆ.
ದಂತೇವಾಡ ನಕ್ಷಲರ ಕಾರಾಸ್ಥಾನವಾಗಿದ್ದು, ಯೋಧರು ಮತ್ತು ಪೆÇಲೀಸರನ್ನು ಗುರಿಯಾಗಿಟ್ಟುಕೊಂಡು ಮಾವೋವಾದಿಗಳು ದಾಳಿ ನಡೆಸಿ ಈವರೆಗೆ ಹಲವರನ್ನು ಕೊಂದು ಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ