ಪಾಕ್ ಸೇನೆಗೆ ಗಡಿ ಭದ್ರತಾ ಪಡೆಯ ತಕ್ಕ ಉತ್ತರ: ವೈರಿ ಪಡೆಯ ಹಲವು ಸೇನಾ ಶಿಬಿರಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ

ಶ್ರೀನಗರ : ಮೇ-20: ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೇನೆಗೆ ಗಡಿ ಭದ್ರತಾ ಪಡೆಯ ಯೋಧರು ತಕ್ಕ ಪಾಠ ಕಲಿಸಿದ್ದು, ಮೇ 19ರಂದು ವೈರಿ ಪಡೆಯ ಹಲವು ಸೇನಾ ಶಿಬಿರಗಳನ್ನು ಧ್ವಂಸಗೊಳಿಸಿದ್ದಾರೆ.

ರಂಜಾನ್ ಪ್ರಯುಕ್ತ ಕದನ ವಿರಾಮ ಕಾಯ್ದುಕೊಳ್ಳುವಂತೆ ಭದ್ರಾತಾ ಪಡೆಗಳಿಗೆ ಕೇಂದ್ರ ಸರ್ಕಾರ ಆದೇಶ ನೀಡಿದ್ದನ್ನೇ ತಮ್ಮ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದ ಪಾಕಿಸ್ತಾನ, ಗಡಿಯಲ್ಲಿ ಉದ್ಧಟತವನ್ನು ಪ್ರದರ್ಶಿಸಿತ್ತು.

ಮೇ.18ರಂದು ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದ ಪಾಕಿಸ್ತಾನ ಸೇನೆ, ಇಬ್ಬರು ನಾಗರೀಕರನ್ನು ಬಲಿ ಪಡೆದುಕೊಂಡಿತ್ತು. ಪಾಕಿಸ್ತಾನ ಈ ಉದ್ಧಟತನಕ್ಕೆ ದಿಟ್ಟ ಉತ್ತರ ನೀಡಿದ್ದ ಗಡಿ ಭದ್ರತಾ ಪಡೆಗಳು ಅಂತರಾಷ್ಟ್ರೀಯ ಗಡಿಯಲ್ಲಿದ್ದ ಪಾಕಿಸ್ತಾನ ಸೇನಾ ಬಂಕರ್ ಗಳನ್ನು ಧ್ವಂಸಗೊಳಿಸಿದೆ.

ಈ ಹಿನ್ನಲೆಯಲ್ಲಿ ಇದೀಗ ಬೆದರಿರುವ ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ನಡೆಸಲಾಗುತ್ತಿರುವ ಗುಂಡಿನ ದಾಳಿನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಎಸ್ಎಫ್ ವಕ್ತಾರ, ಜಮ್ಮುವಿನ ಗಡಿ ಭದ್ರತಾ ಪಡೆ ಅಧಿಕಾರಿಗಳನ್ನು ಕರೆದ ಪಾಕಿಸ್ತಾನ ಪಡೆಗಳು, ಗುಂಡಿನ ದಾಳಿ ನಡೆಸುವುದನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡಿತು ಎಂದು ಹೇಳಿದ್ದಾರೆ.

ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿತ್ತು. ಈ ಹಿನ್ನಲೆಯಲ್ಲಿ ಸೇನೆ ದಿಟ್ಟ ಉತ್ತರವನ್ನು ನೀಡಿತ್ತು ಎಂದು ಹಿರಿಯ ಆಧಿಕಾರಿ ಹೇಳಿದ್ದಾರೆರೆ.

ಕಳೆದ ಮೂರು ದಿನಗಳಿಂದ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸುತ್ತಿದೆ. ಇದರ ಪರಿಣಾಮ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದರು. ಇದಲ್ಲದೆ, ಹಲವು ನಾಗರೀಕರೂ ಕೂಡ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ