ರಾಯಚೂರು: ಮೇ,15 ಮಾನ್ವಿ ವಿಧಾನಸಭಾ ಕ್ಷೇತ್ರ ಮೊದಲ ಸುತ್ತಿನ ಅಂತ್ಯಕ್ಕೆ ಜೆಡಿಎಸ್ ನ ರಾಜಾ ವೆಂಕಟಪ್ಪ ನಾಯಕ 212 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಾಯಚೂರು ನಗರ ಕ್ಷೇತ್ರದಲ್ಲಿ ಮೊದಲ ಸುತ್ತಿನಲ್ಲಿ ಬಿಜೆಪಿಯ ಡಾ.ಶಿವರಾಜ್ ಪಾಟೀಲ್ ಮುನ್ನಡೆ ಸಾಧಿಸಿದ್ದು, ರಾಯಚೂರು ಗ್ರಾಮೀಣ ದಲ್ಲಿ ಕಾಂಗ್ರೆಸ್ ನ ದದ್ದಲ ಬಸನಗೌಡ ಹಾಗೂ ಸಿಂಧನೂರಿನಲ್ಲಿ ಜೆಡಿಎಸ್ ನ ವೆಂಕಟರಾವ್ ನಾಡಗೌಡ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನ ಕೊನೆಗೆ ಮಾನ್ವಿ ಕ್ಷೇತ್ರ ಜೆಡಿಎಸ್ ನ ರಾಜಾ ವೆಂಕಟಪ್ಪ ನಾಯಕ 1519 ಮತಗಳಿಂದ ಮುನ್ನಡೆ ಸಾಧಿಸಿದ್ದು, ಲಿಂಗಸುಗೂರು ಕ್ಷೆತ್ರದಲ್ಲಿ ಜೆಡಿಎಸ್ ನ ಸಿದ್ದು ಬಂಡಿ, ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಬಸನಗೌಡ ತುರುವಿಹಾಳ ಹಾಗೂ ದೇವದುರ್ಗದಲ್ಲಿ ಬಿಜೆಪಿಯ ಶಿವನಗೌಡ ನಾಯಕ ಮುನ್ನಡೆ ಸಾಧಿಸಿದ್ದಾರೆ.