ಮದ್ದೂರು,ಮೇ14- ತಾಲ್ಲೂಕಿನ ಕೊಪ್ಪ ಹೋಬಳಿ ಕೊಣಸಾಲೆ ಗ್ರಾಮದಲ್ಲಿ ಸಾಲಬಾಧೆಯಿಂದ ರೈತನೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಗ್ರಾಮದ ಕೃಷ್ಣ(45) ಮೃತ ರೈತ. ತನ್ನ ಮನೆ ಹಿಂಭಾಗದ ದನದ ಕೊಟ್ಟಿಗೆಯಲ್ಲಿ ಹಗ್ಗದಿಂದ ಕೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೊಣಸಾಲೆ ಗ್ರಾಮದಲ್ಲಿಇವನ ತಾಯಿ ಕೆಂಪಮ್ಮ ಹೆಸರಿನಲ್ಲಿ 2.10 ಎಕರೆ ಕೃಷಿ ಜಮೀನಿದ್ದು ಕಷ್ಣ ಅವರೇ ನಿರ್ವಹಿಸುತ್ತಿದ್ದರು.ಜಮೀನಿನಲ್ಲಿ ಕಬ್ಬು ಮತ್ತು ಭತ್ತ ಬೆಳೆಯಲಾಗಿತ್ತು. ಬೆಳೆಗಾಗಿ ಕೊಣಸಾಲೆ ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ 40 ಸಾವಿರ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಲ್ಲಿ 40 ಸಾವಿರ ಮತ್ತು ಸ್ತ್ರೀ ಶಕ್ತಿ ಸಂಘದಲ್ಲಿ 40 ಸಾವಿರ ಹಾಗೂ ಖಾಸಗಿಯಾಗಿ 3 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ. ಗಿರವಿ ಅಂಗಡಿಗೆ ಹೆಂಡತಿಯ ಚಿನ್ನಾಭರಣಡವಿಟ್ಟು 40 ಸಾವಿರ ತೆಗೆದುಕೊಂಡಿದ್ದರು. ಜಮೀನಿನಲ್ಲಿ ಬಿತ್ತನೆ ಆಗಿದ್ದ ಬೆಳೆಯಲ್ಲಿ ಹಾನಿ ಉಂಟಾಯಿತು. ಇದರಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ಬೆಸಗರಹಳ್ಳಿ ಪೆÇಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.