ಬಾಗಲಕೋಟ 21- ಶ್ರೀಮತಿ ಉಷಾ ಆನಂದ ಪಾಟೀಲ ಇವರಿಗೆ ನಟರಾಜ ನೃತ್ಯ ನಿಕೇತನ (ರಿ) ವಿದ್ಯಾಗಿರಿ ಬಾಗಲಕೋಟ ಇವರು ಮಂತ್ರಾಲಯದಲ್ಲಿ ಜರುಗಿದ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಕಾರ್ಯಕ್ರಮದಲ್ಲಿ ಅಮೋಘವಾದ ಭರತನಾಟ್ಯ ಪ್ರದರ್ಶನ ನೀಡಿದ್ದಕ್ಕಾಗಿ ರಾಷ್ಟ್ರೀಯ ಕಲ್ಪವೃಕ್ಷ ಪ್ರಶಸ್ತಿಯನ್ನು ಪಡೆದು ಗುರು ಶ್ರೀಮತಿ ಶುಭದಾ ಜಿ. ದೇಶಪಾಂಡೆ ಇವರ ಮೆಚ್ಚುಗೆಗೆ ಪಾತ್ರಾಗಿದ್ದಾರೆ. ಈ ಮೊದಲು ಇವರು ನ್ಯಾಶನಲ್ ಹಾರ್ಮೋನಿ 2011-12, ಬಸವಜ್ಯೋತಿ ರಾಜ್ಯ ಪ್ರಶಸ್ತಿ, ಗಣರಾಜ್ಯೋತ್ಸವ ಪ್ರಶಸ್ತಿ ಮತ್ತು ಕರ್ನಾಟಕ ಭೂಷಣ ಪ್ರಶಸ್ತಿ ಪಡೆದು ಬಾಗಲಕೋಟೆಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರು ಎರಡು ಮಕ್ಕಳ ತಾಯಿ ಇದ್ದು, ತಮ್ಮ ಕಠಿಣ ಅಭ್ಯಾಸದಿಂದ ಶಾಸ್ತ್ರೀಯ ನೃತ್ಯವನ್ನು ಮುಂದೆ ನಡೆಯಲಿರುವ ರನ್ನ ಉತ್ಸವದಲ್ಲೂ ಪ್ರದರ್ಶನ ನೀಡಲಿದ್ದಾರೆ.