ಇಂಡೋನೇಷ್ಯಾದ ಸುರಬಯಾದಲ್ಲಿ ಮತ್ತೆ ಉಗ್ರರ ಅಟ್ಟಹಾಸ!

ಸುರಬಯಾ, ಮೇ 14-ದ್ವೀಪ ರಾಷ್ಟ್ರದ ಇಂಡೋನೇಷ್ಯಾದ ಎರಡನೇ ಅತಿ ದೊಡ್ಡ ನಗರ ಸುರಬಯಾದಲ್ಲಿ ಇಂದು ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ಧಾರೆ. ಮೋಟಾರ್ ಸೈಕಲ್ ಮೇಲೆ ಬಂದ ಇಬ್ಬರು ಉಗ್ರರು ಪೆÇಲೀಸ್ ಕೇಂದ್ರ ಕಚೇರಿ ಬಳಿ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟು , ಹಲವರು ಗಾಯಗೊಂಡಿದ್ದಾರೆ.
ಇದೇ ಪಟ್ಟಣದಲ್ಲಿ ನಿನ್ನೆ ಚರ್ಚ್‍ಗಳ ಹೊರಗೆ ಸಂಭವಿಸಿದ ಬಾಂಬ್ ಸ್ಪೋಟಗಳಲ್ಲಿ 14 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದರು.
ಮೋಟಾರ್ ಸೈಕಲ್‍ನಲ್ಲಿ ಬಂದ ಪುರುಷ ಮತ್ತು ಮಹಿಳೆ ಕೇಂದ್ರ ಕಚೇರಿ ಬಳಿ ಚೆಕ್‍ಪೆÇೀಸ್ಟ್‍ನಲ್ಲಿ ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ. ಈ ದಾಳಿಯಲ್ಲಿ ಕರ್ತವ್ಯ ನಿರತ ಪೆÇಲೀಸ್ ಸಾವಿಗೀಡಾಗಿ, ಇತರ 10 ಮಂದಿ ಗಾಯಗೊಂಡರು ಎಂದು ಪೂರ್ವ ಜಾವಾದ ಪೆÇಲೀಸ್ ವಕ್ತಾರರು ತಿಳಿಸಿದ್ದಾರೆ.
ನಿನ್ನೆಯಿಂದ ಆತ್ಮಹತ್ಯಾ ಬಾಂಬ್ ದಾಳಿ ಸೇರಿದಂತೆ ಸರಣಿ ಸ್ಫೋಟಗಳಿಂದ ಈ ಪಟ್ಟಣದ ಜನರು ಭಯಭೀತರಾಗಿದ್ದಾರೆ.
ನಿನ್ನೆ ಬೆಳಗ್ಗೆ 7.30ರಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಗಳು ನಡೆದಿವೆ. ಕನಿಷ್ಠ 14 ಮಂದಿ ಹತರಾಗಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇಬ್ಬರು ಸಹೋದರಿಯರೂ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಈ ಆತ್ಮಹತ್ಯಾ ದಾಳಿಗಳನ್ನು ನಡೆಸಿದ್ದರು.
ಸುರಬಯಾ ಪಟ್ಟಣದಲ್ಲಿ ಕ್ರೈಸ್ತರು, ಹಿಂದೂಗಳು ಮತ್ತು ಬೌದ್ಧ ಧರ್ಮೀಯರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಅಲ್ಪಸಂಖ್ಯಾತರು ಆತಂಕಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ