ಕಠ್ಮಂಡು, ಮೇ 12-ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಶ್ವವಿಖ್ಯಾತ ಮುಕ್ತಿನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹಿಂದು ಮತ್ತು ಬೌದ್ಧರ ಪವಿತ್ರ ಮಂದಿರವಾದ ಮುಕ್ತಿನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಥಮ ವಿಶ್ವ ನಾಯಕರೆಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ.
ಬೌದ್ಧ ಧರ್ಮೀಯರ ಸಂಪ್ರದಾಯಿಕ ಕೆಂಪು ವಸ್ತ್ರ ಧರಿಸಿದ್ದ ಮೋದಿ ಹಿಂದು ಮತ್ತು ಬೌದ್ಧ ಧರ್ಮಗಳಿಗೆ ಅನುಗುಣವಾಗಿ ಧಾರ್ಮಿಕ ಕೈಂಕರ್ಯ ನಡೆಸಿದರು.
ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ ನಂತರ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಜನರೊಂದಿಗೆ ಕೆಲಕಾಲ ಆತ್ಮೀಯವಾಗಿ ಬೆರೆತು ಪ್ರಧಾನಿ ಸಂವಾದ ನಡೆಸಿದರು.
ಮುಕ್ತಿನಾಥ ದೇವಾಲಯದ ಗರ್ಭಗುಡಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ ಪ್ರಥಮ ವಿದೇಶಿ ಗಣ್ಯಾತಿಗಣ್ಯ ವ್ಯಕ್ತಿ ಮೋದಿ ಎಂದು ನೇಪಾಳ ಪ್ರಧಾನಮಂತ್ರಿ ಕೆ.ಪಿ.ಶರ್ಮ ಒಲಿ ತಿಳಿಸಿದ್ದಾರೆ.