ಹೊಸದಿಲ್ಲಿ ,ಮೇ 10
ಇದೇ ಶನಿವಾರ ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ನಡೆದಿರುವ ಅನೇಕ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿನ ಅಧಿಕಾರರೂಢ ಕಾಂಗ್ರೆಸ್ ಪಕ್ಷ ಅತೀ ಹೆಚ್ಚಿನ ಸ್ಥಾನಗಳೊಂದಿಗೆ ಅಗ್ರ ಸ್ಥಾನಿಯಾಗಿ ಮೂಡಿಬರಲಿದೆ; ಭಾರತೀಯ ಜನತಾ ಪಕ್ಷ ಎರಡನೇ ಸ್ಥಾನ ಪಡೆಯಲಿದೆ. ಮೇ 15ರ ಮಂಗಳವಾರದಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
225 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ 224 ಸ್ಥಾನಗಳಿಗೆ ಮೇ 12ರಂದು ಮತದಾನ ನಡೆಯಲಿದೆ. ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ನಿಗಿದಿಯಾಗಿರುವ ಒಂದು ಸ್ಥಾನಕ್ಕೆ ರಾಜ್ಯಪಾಲರು ನಾಮಕರಣ ಮಾಡಲಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈ ಬಾರಿಯ ಚುನಾವಣೆಯಲ್ಲಿ ಕತ್ತುಕತ್ತಿನ ಸ್ಪರ್ಧೆ ನಡೆಯುವುದು ನಿಶ್ಚಿತವೇ ಇದ್ದರೂ ಅತಂತ್ರ ವಿಧಾನಸಭೆ ಏರ್ಪಡುವ ಸಾಧ್ಯತೆಯೇ ಹೆಚ್ಚೆಂದು ಸಮೀಕ್ಷೆಗಳು ಹೇಳುತ್ತವೆ.
ಟೈಮ್ಸ್ ನೌ – ವಿಎಂಆರ್ ಚುನಾವಣಾ ಪೂರ್ವ ಸಮಿಕ್ಷೆಯ ಪ್ರಕಾರ ಕಾಂಗ್ರೆಸ್ಗೆ 91, ಬಿಜೆಪಿಗೆ 89, ಜೆಡಿಎಸ್ಗೆ 40 ಸ್ಥಾನ ಸಿಗಲಿದೆ.
ಇಂಡಿಯಾ ಟುಡೇ ಸಮೂಹದ ಕಾರ್ವಿ ಇನ್ಸೈಟ್ ಜನಾಭಿಪ್ರಾಯ ಸಂಗ್ರಹದ ಪ್ರಕಾರ ಕಾಂಗ್ರೆಸ್ಗೆ 90 ರಿಂದ 101 ಸ್ಥಾನ, ಬಿಜೆಪಿಗೆ 78-86 ಸ್ಥಾನ, ಜೆಡಿಎಸ್ಗೆ 34-43 ಸ್ಥಾನ ಪ್ರಾಪ್ತವಾಗಲಿದೆ.
ನ್ಯೂಸ್ ಎಕ್ಸ್ – ಸಿಎನ್ಎಕ್ಸ್ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ಗೆ 90 ಸ್ಥಾನ, ಬಿಜೆಪಿಗೆ 87 ಸ್ಥಾನ, ಜೆಡಿಎಸ್ಗೆ 39 ಸ್ಥಾನ, ಪಕ್ಷೇತರರಿಗೆ 7 ಸ್ಥಾನ ಸಿಗಲಿದೆ.
ಎಬಿಪಿ ನ್ಯೂಸ್ – ಸಿಎಸ್ಡಿಸಿ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಗೆ 97, ಬಿಜೆಪಿಗೆ 84, ಜೆಡಿಎಸ್ಗೆ 37 ಸೀಟುಗಳು ಸಿಗಲಿವೆ.
ಇಂಡಿಯಾ ಟಿವಿ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಗೆ 96, ಬಿಜೆಪಿಗೆ 85, ಜೆಡಿಎಸ್ಗೆ 38 ಸ್ಥಾನ ಸಿಗಲಿದೆ.
ಸಿ-ಫೋರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 68, ಕಾಂಗ್ರೆಸ್ಗೆ 123, ಜೆಡಿಎಸ್ಗೆ 32, ಪಕ್ಷೇತರರಿಗೆ 4 ಸ್ಥಾನ ಸಿಗಲಿವೆ.
ವಿಎಂಆರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 89, ಕಾಂಗ್ರೆಸ್ಗೆ 91, ಜೆಡಿಎಸ್ಗೆ 40, ಪಕ್ಷೇತರರಿಗೆ 4 ಸ್ಥಾನ ಸಿಗಲಿವೆ.
ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿ ಗೆ 102-108, ಕಾಂಗ್ರೆಸ್ಗೆ 72-74, ಜೆಡಿಎಸ್ಗೆ 42-44 ಸ್ಥಾನ ಪ್ರಾಪ್ತವಾಗಲಿದೆ.
ಸುವರ್ಣ ಒಪೀನಿಯನ್ ಪೋಲ್ ಪ್ರಕಾರ ಬಿಜೆಪಿಗೆ 102, ಕಾಂಗ್ರೆಸ್ಗೆ 72, ಜೆಡಿಎಸ್ಗೆ 44 ಮತ್ತು ಪಕ್ಷೇತರರಿಗೆ 4 ಸ್ಥಾನ ಸಿಗಲಿದೆ.
ಮುಂದಿನ ವರ್ಷ ಅಂದರೆ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕ ವಿಧಾನಸಭಾ ಚುನಾವಣೆಯು ಬಿಜೆಪಿಗೆ ಸೆಮಿಫೈನಲ್ ಆಗಿದೆಯಾದರೆ ಕಾಂಗ್ರೆಸ್ಗೆ ರಾಷ್ಟ್ರಮಟ್ಟದಲ್ಲಿನ ತನ್ನ ಅಸ್ತಿತ್ವದ ಉಳಿವಿಗೆ ಇದು ಸತ್ವ ಪರೀಕ್ಷೆಯೇ ಆಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ವಿಧಾನಸಭಾ ಚುನಾವಣೆ ತನ್ನ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದೆ ಎಂದು ಕೂಡ ಹೇಳಿರುವುದು ಗಮನಾರ್ಹವಾಗಿದೆ.