ಔರಾದ್ನಲ್ಲಿ ಪ್ರಭು ಚವ್ಹಾಣ್ ಸಮ್ಮುಖ ಸೇರ್ಪಡೆ
ಹಲವರು ಬಿಜೆಪಿ ಸೇರ್ಪಡೆ
ಬೀದರ, ಮೇ. 5- ಔರಾದ್ ಮೀಸಲು ಕ್ಷೇತ್ರದಲ್ಲಿ ಹಲವರು ವಿವಿಧ ಪಕ್ಷಗಳು ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಅಶೋಕ ಮೂಳೆ, ಬಾಬುಲಾಲ ಸೇಠ್, ಸಂಜು ರೆಡ್ಡಿ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಅಭ್ಯರ್ಥಿ, ಶಾಸಕ ಪ್ರಭು ಚವ್ಹಾಣ್ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಪ್ರಭು ಚವ್ಹಾಣ್, ನಿತ್ಯ ನೂರಾರು ಜನ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ನನಗೆ ಮತ್ತಷ್ಟು ಬಲ ಬಂದಿದೆ. ಕಾಂಗ್ರೆಸ್, ಜೆಡಿಎಸ್ ಠೇವಣಿ ಉಳಿಸಿಕೊಳ್ಳುವುದು ಕಷ್ಟ ಎಂದು ಹೇಳಿದರು.
ಮೇ 9ರಂದು ಬೀದರ್ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದು, ಕಾಂಗ್ರೆಸ್, ಜೆಡಿಎಸ್ಗೆ ನಡುಕ ಶುರುವಾಗಿದೆ. ನಮ್ಮ ಸೋಲು ಗ್ಯಾರಂಟಿ ಎಂದು ಎರಡು ಪಕ್ಷಗಳಿಗೆ ತಿಳಿದಿದೆ. ಈ ಬಾರಿ ಬಿಜೆಪಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೇ 12ರಂದು ಎಲ್ಲರು ತಪ್ಪದೇ ಮತದಾನ ಮಾಡುವ ಮೂಲಕ ಬಿಜೆಪಿಗೆ ಭರ್ಜರಿ ಬಹುಮತದೊಂದಿಗೆ ಗೆಲ್ಲಿಸಬೇಕು. ನೀವು ಮತದಾನ ಮಾಡುವ ಜೊತೆಯಲ್ಲಿ ನಿಮ್ಮವರಿಗೂ ಕೇಂದ್ರಕ್ಕೆ ಕರೆದುಕೊಂಡು ಮತದಾನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.