ಬೆಂಗಳೂರು, ಮೇ 2- ಕಾಂಗ್ರೆಸ್ ಪಕ್ಷ ತೊರೆದ ಪದ್ಮಿನಿ ಪೆÇನ್ನಪ್ಪ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷವನ್ನು ತೊರೆದು ಇಂದು ಜೆಡಿಎಸ್ ಸೇರ್ಪಡೆಯಾದರು.
ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿ ಅವರು ಸೇರ್ಪಡೆಯಾದರು. ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಪಕ್ಷ ಬಿಟ್ಟಿದ್ದಾರೆ.
ಜೆಡಿಎಸ್ ಸೇರಿದ ಪದ್ಮಿನಿಪೆÇನ್ನಪ್ಪ ಅವರಿಗೆ ಗೌಡರು ಪಕ್ಷದ ರಾಜ್ಯ ಉಪಾಧ್ಯಕ್ಷೆ ಸ್ಥಾನ ನೀಡಿದ್ದಾರೆ.