ಬಾಲಸೋರ್, ಫೆ.20-ದೇಶದ ಶಸ್ತ್ರಾಸ್ತ್ರ ಕೋಠಿಗೆ ಮತ್ತೊಂದು ಪ್ರಬಲ ಅಸ್ತ್ರ ಸೇರ್ಪಡೆಯಾಗಿದೆ. 2,000 ಕಿ.ಮೀ. ದೂರದಲ್ಲಿರುವ ವೈರಿ ಗುರಿ ಮೇಲೆ ಕರಾರುವಕ್ಕಾಗಿ ದಾಳಿ ಮಾಡಬಲ್ಲ ಅಣ್ವಸ್ತ್ರ ಸಾಮಥ್ರ್ಯದ ಮಧ್ಯಮ ಶ್ರೇಣಿ ಅಗ್ನಿ-2 ಖಂಡಾಂತರ ಕ್ಷಿಪಣಿಯನ್ನು ಇಂದು ಒಡಿಶಾ ಕರಾವಳಿಯಲ್ಲಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಅಬ್ದುಲ್ ಕಲಾಂ ದ್ವೀಪ(ವೀಲ್ಹರ್ಸ್ ಐಲ್ಯಾಂಡ್)ದಲ್ಲಿ ಸಮಗ್ರ ಪರೀP್ಷÁ ವಲಯ (ಐಟಿಆರ್)ದ ಉಡಾವಣೆ ಸಂರ್ಕೀಣ-4ರಲ್ಲಿ ಸಂಚಾರಿ ವಾಹಕದ ಮೂಲಕ ಭೂಮಿಯಿಂದ ಭೂಮಿಗೆ ಚಿಮ್ಮುವ ಅಗ್ನಿ-2 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಮಧ್ಯಂತರ ಶ್ರೇಣಿ ಪ್ರೇಕ್ಷೇಪಕ ಕ್ಷಿಪಣಿ(ಐಆರ್ಬಿಎಂ) ಅಸ್ತ್ರವನ್ನು ಈಗಾಗಲೇ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ(ಡಿಆರ್ಡಿಒ) ಮೂಲಕ ಒದಗಿಸಲಾದ ಸಹಕಾರದೊಂದಿಗೆ ಸೇನೆಯ ಮಹತ್ವದ ಪಡೆಗಳಿಂದ(ಎಸ್ಎಫ್ಸಿ) ಈ ಪರೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ವಿವರಿಸಿವೆ.
20 ಮೀಟರ್ ಉದ್ದದ ಅಗ್ನಿ-2 ಖಂಡಾಂತರ ಕ್ಷಿಪಣಿ 17 ಟನ್ ತೂಕ ಹೊಂದಿದ್ದು, 2,000 ಕಿ.ಮೀ. ದೂರದವರೆಗೆ 1,000 ಕೆಜಿ ತೂಕದ ಅಣ್ವಸ್ತ್ರ ಪೇಲೋಡ್ನನ್ನು ಹೊತ್ತೊಯ್ಯುಬಲ್ಲದು.