ಐದು ವರ್ಷಗಳಲ್ಲಿ ಎರಡು ಸಾವಿರ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ ಹಾಗೂ ಎಂಟು ಸಾವಿರ ಗಿಡಗಳನ್ನು ನೆಟ್ಟು ಪೋಷಿಶಾಲಾಗಿದೆ

ಬೆಂಗಳೂರು,ಏ.27-ಕಳೆದ ಐದು ವರ್ಷಗಳಲ್ಲಿ ಎರಡು ಸಾವಿರ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ ಹಾಗೂ ಎಂಟು ಸಾವಿರ ಗಿಡಗಳನ್ನು ನೆಟ್ಟು ಪೆÇೀಷಿಸಲಾಗಿದೆ ಎಂದು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಅಶ್ವಥ್ ನಾರಾಯಣ್ ತಿಳಿಸಿದರು.

ಅರಮನೆ ನಗರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಡಾ. ರಾಜ್‍ಕುಮಾರ್ ಯುವಕ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಹಸಿರು ಪ್ರಜ್ಞೆ ಜಾಗೃತಗೊಳಿಸಲು ಯುವಕರು ಸಕ್ರಿಯರಾಗಬೇಕು, ಸಾಧ್ಯವಾದಲ್ಲೆಲ್ಲ ಜಾಗೃತಿ ಮೂಡಿಸುತ್ತಿರಬೇಕು ಎಂದು ಹೇಳಿದರು.

ನಿಷ್ಪ್ರಯೋಜಕ ಎಂದು ಎ¸ಯುವ ಕಸ ಸೂಕ್ತ ರೀತಿಯ ವಿಲೇವಾರಿ ಮಾಡಿದರೆ ಉತ್ತಮ ಗೊಬ್ಬರವಾಗುತ್ತದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಜಾಗೃತಿಯ ಪರಿಣಾಮ ಸಂಗ್ರಹ ಸಮಯದಲ್ಲೇ ತ್ಯಾಜ್ಯ ಪ್ರತ್ಯೇಕಿಸುವ ಪ್ರಮಾಣ ಶೇ. 160ರಿಂದ 170ರಷ್ಟು ಹೆಚ್ಚಾಗಿದೆ. ಇವತ್ತು ಸ್ಥಳೀಯವಾಗಿ ಕಸ ವಿಲೇವಾರಿ ಕೇಂದ್ರಗಳು ದಾಖ¯ಯ ದಿನಂಪ್ರತಿ 3.5 ಟನ್ ಬಯೋಗ್ಯಾಸ್ ಮತ್ತು 800 ಕೆಜಿಯಷ್ಟು ಜೈವಿಕ ಗೊಬ್ಬರ ಉತ್ಪಾದನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಡಾ. ಅಶ್ವಥ್ ನಾರಾಯಣ್ ಅವರು ಜನಸಾಮಾನ್ಯರಿಗೆ ಬೇಕಾದಾಗ ಕೈಗೆಟುಕುವ ವ್ಯಕ್ತಿ, ಜನರನ್ನು ಪ್ರೀತಿಸುವ ವ್ಯಕ್ತಿ. ಈ ನೆ¯ಯಲ್ಲಿ ಪ್ರೀತಿಪೂರ್ವಕವಾಗಿ ಅವರನ್ನು ಸನ್ಮಾನಿಸುತ್ತಿದ್ದೇವೆ ಎಂದು ಸಂಘದ ಉಪಾಧ್ಯಕ್ಷ ಲೋಕೇಶ್ ನುಡಿದರು.

ಅರಮನೆ ನಗರ ವಾರ್ಡ್ ಸಂಖ್ಯೆ 35ರ ಅಶ್ವಥ್‍ನಗರ, ಪೂಜಾರಿ ಪಾಳ್ಯ, ಡಾ. ಶಿವಪ್ರಸಾದ್ ಉದ್ಯಾನವನ ಹಾಗೂ ವಾರ್ಡ್‍ನ ಡಾಲರ್ಸ್ ಕಾಲನಿ ಭಾಗದಲ್ಲಿ ಅಶ್ವಥ್ ನಾರಾಯಣ್ ಅವರು ಪಾದಯಾತ್ರೆ ನಡೆಸಿದರು. ನೂರಕ್ಕೂ ಹೆಚ್ಚು ಜvಯಲ್ಲಿ ವಾರ್ಡ್ ಅಧ್ಯಕ್ಷ ಶಿವಣ್ಣ, ಪಾಲಿಕೆ ಸದಸ್ಯೆ ಸುಮಂಗಲಾ ಕೇಶವ್, ಮಂಡಲ ಅಧ್ಯಕ್ಷ ಕೇಸವ್ ಐತಾಳ್ ಜತೆನಡೆದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ