ಹೊಸದಿಲ್ಲಿ : ದತ್ತಾಂಶ ಸಂರಕ್ಷಣಾ ಮಸೂದೆ ಜಾರಿಗೆ ಬರುವವರೆಗೂ ಹೊಸ ಗೌಪ್ಯತೆ ನೀತಿ ಒಪ್ಪಿಕೊಳ್ಳುವಂತೆ ಗ್ರಾಹಕರನ್ನು ಒತ್ತಾಯಿಸುವುದಿಲ್ಲ ಹಾಗೂ ನೀತಿ ಒಪ್ಪಿಕೊಳ್ಳದ ಗ್ರಾಹಕರಿಗೆ ಸೇವೆಗೆ ತಡೆ ನೀಡುವುದಿಲ್ಲ ಎಂದು ದಿಲ್ಲಿ ಹೈಕೋರ್ಟ್ಗೆ ಜಾಲತಾಣ ದೈತ್ಯ ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ತಿಳಿಸಿದೆ.
ಗ್ರಾಹಕರ ಗೌಪ್ಯಮಾಹಿತಿ ಭದ್ರತೆ ಹಿತದೃಷ್ಟಿಯಿಂದ ವಾಟ್ಸ್ಆ್ಯಪ್ ಗೌಪ್ಯತೆ ನೀತಿ ಸಂಬಂಸಿದಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಸಂಸ್ಥೆಗೆ ನೋಟಿಸ್ ನೀಡಿದ್ದು, ಈ ಸಂಬಂಸಿದಂತೆ ಭಾರತದ ಸ್ಪರ್ಧಾ ಆಯೋಗ ಸಿಸಿಐ ಗೌಪ್ಯತೆ ನೀತಿ ತಡೆಗೆ ಆದೇಶಿಸಿತ್ತು.
ಸಿಸಿಐ ಆದೇಶ ಪ್ರಶ್ನಿಸಿ ದಿಲ್ಲಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಅರ್ಜಿಯನ್ನು ನ್ಯಾಯಮೂರ್ತಿ ಡಿ.ಎನ್ .ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠ ವಿಚಾರಣೆ ನಡೆಸಿದ್ದು, ನ್ಯಾಯಾಲಯಕ್ಕೆ ವಾಟ್ಸ್ ಆ್ಯಪ್ ಈ ರೀತಿ ಪ್ರತಿಕ್ರಿಯಿಸಿದೆ.
ವಾಟ್ಸ್ಆ್ಯಪ್ ಪರ ವಕೀಲ ಹರೀಶ್ ಸಾಳ್ವೆ , ಹೊಸ ನೀತಿಯನ್ನು ತಡೆ ಹಿಡಿಯಲು ನಿರ್ಧರಿಸಲಾಗಿದ್ದು, ಯಾವುದೇ ಬಳಕೆದಾರರೂ ಹೊಸ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳುವಂತೆ ಸಂಸ್ಥೆ ಒತ್ತಾಯಿಸುವುದಿಲ್ಲ. ಬಳಕೆದಾರರಿಗೆ ನೂತನ ಆವೃತ್ತಿಯ ಬಳಕೆಗೂ ಅನುಮತಿಸುತ್ತದೆ ಎಂದಿದ್ದಾರೆ.