ಕರ್ನಾಟಕದ ಸ್ವಂತ ಓಟಿಟಿ ವೇದಿಕೆ ‘ಕಟ್ಟೆ’ ಸಿದ್ಧ

ಬೆಂಗಳೂರು, ಏಪ್ರಿಲ್‌ 18, 2021: ಜುಗಾರಿ ಬ್ರದರ್ಸ್ ಎಂದೇ ಜನಪ್ರಿಯವಾಗಿರುವ ಅರವಿಂದ ಮತ್ತು ಅವಿನಾಶ್ (ಮೊದಲ ಚಿತ್ರ ಜುಗಾರಿಯಿಂದ), ಕರ್ನಾಟಕದ ಮತ್ತು ಜಗತ್ತಿನಾದ್ಯಂತ ಹರಡಿಕೊಂಡಿರುವ ಕನ್ನಡಿಗರಿಗಾಗಿ ‘ಕಟ್ಟೆ’ ಎಂಬ ಓಟಿಟಿ ವೇದಿಕೆಯನ್ನು (OTT ಪ್ಲಾಟ್‌ಫಾರ್ಮ್) ನಿರ್ಮಿಸುವ ಸಾಹಸ ಮಾಡಿದ್ದಾರೆ.

ಕಟ್ಟೆಯ ಹಿಂದೆ ಹಾಸ್ಯನಟ, ದಿವಂಗತ ನರಸಿಂಹರಾಜು ಅವರ ಮೊಮ್ಮಕ್ಕಳ ಸೃಜನಶೀಲ ಮನಸ್ಸು ಕೆಲಸ ಮಾಡಿರುವುದು ಗಮನಾರ್ಹ. ‘ಕಟ್ಟೆ’ ಕರ್ನಾಟಕದ ಜನರ ಮನರಂಜನಾ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಿದೆ. ಕೊರೋನಾ ಸಾಂಕ್ರಾಮಿಕದಿಂದಾಗಿ ಕಳೆದ ಒಂದು ವರ್ಷದಿಂದ ಓಟಿಟಿ ಮಾರುಕಟ್ಟೆ ಹೊಸ ಭರವಸೆಯಾಗಿ ಬೆಳೆಯುತ್ತಿದೆ. ಈ ವೇದಿಕೆಗೆ ಕನ್ನಡದ ಗಂಧ ತುಂಬಲು ಜುಗಾರಿ ಬ್ರದರ್ಸ್ ಕಾರ್ಯಪ್ರವೃತ್ತರಾಗಿದ್ದಾರೆ.

ಮನರಂಜನಾ ಕ್ಷೇತ್ರದಲ್ಲಿ ಭಾರಿ ಅಂತರವಿದ್ದು, ಅದನ್ನು ತುಂಬಬೇಕಾದ ಅಗತ್ಯವಿದೆ. ಸ್ಥಳೀಯ ಕಲಾವಿದರನ್ನು ಉತ್ತೇಜಿಸುವ, ಕರ್ನಾಟಕದ ಮನರಂಜನಾ ಕ್ಷೇತ್ರದ ಅಗತ್ಯಗಳನ್ನು ಪ್ರತ್ಯೇಕವಾಗಿ ಪೂರೈಸುವ ಓಟಿಟಿ ಪ್ಲಾಟ್‌ಫಾರ್ಮ್‌ನ ಬಹುಕಾಲದ ಅಗತ್ಯ ಇದೀಗ ಈಡೇರಿದಂತಾಗಿದೆ’’ ಎಂದು ಕಟ್ಟೆ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಡಿ ಅರವಿಂದ ಹೇಳಿದರು.

ಜನರು ಇನ್ನು ಮುಂದೆ ಸ್ಥಳೀಯ ಭಾವನೆಗಳು ಮತ್ತು ಸಂಸ್ಕೃತಿಯೊಂದಿಗೆ ತಾಳೆ ಆಗದ ಡಬ್ ಕಾರ್ಯಕ್ರಮಗಳು ಅಥವಾ ಶೋಗಳನ್ನು ನೋಡುವುದನ್ನು ಬಹುತೇಕ ಕೈಬಿಡುತ್ತಾರೆ. ಸ್ಥಳೀಯ ಸಂಸ್ಕೃತಿ ಮತ್ತು ಕಥೆಗಳಿಂದ ಬೆಳೆಯುವ ಅನೇಕ ಇನ್‌ಹೌಸ್‌ ನಿರ್ಮಾಣಗಳನ್ನು ಹೊಂದಿರುವ ಕಟ್ಟೆಯು ಖಂಡಿತವಾಗಿಯೂ ಆ ಅಂತರವನ್ನು ನಿವಾರಿಸಲು ಸಹಾಯ ಮಾಡುತ್ತದೆ’’ ಎಂದು ಕಟ್ಟೆ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್ ಅಭಿಪ್ರಾಯಪಟ್ಟರು.

ಕಟ್ಟೆ: ಕಟ್ಟೆ ಎಂಬುದು ಓಟಿಟಿ ಪ್ಲಾಟ್‌ಫಾರ್ಮ್ ಆಗಿದ್ದು, ಅದು ಕರ್ನಾಟಕದ ಮನರಂಜನಾ ಕ್ಷೇತ್ರದಲ್ಲಿನ ಅಂತರವನ್ನು ತುಂಬಲು ಪ್ರಯತ್ನಿಸುತ್ತದೆ. ಈ ವೇದಿಕೆಯು ಕರ್ನಾಟಕದ ಎಲ್ಲಾ ಉಪಭಾಷೆಗಳ ಮನರಂಜನಾ ಅಗತ್ಯಗಳನ್ನು ಪ್ರತ್ಯೇಕವಾಗಿ ಪೂರೈಸುವ ಗುರಿಯನ್ನು ಹೊಂದಿದೆ.

ಕಟ್ಟೆ ಆಡಿಯೋ: ಕಟ್ಟೆ ಆಡಿಯೋ ಸಮಗ್ರ ವೇದಿಕೆಯಾಗುವ ಉದ್ದೇಶ ಹೊಂದಿರುವ ಕಟ್ಟೆ, ಗಾಯಕರು, ಸಂಯೋಜಕರು ಮತ್ತು ಸಂಗೀತಗಾರರಿಗೆ ವೇದಿಕೆ ಒದಗಿಸುವ ಗುರಿ ಹೊಂದಿದೆ. ಕಟ್ಟೆ ಆಡಿಯೋ ಮೂಲ ಸಂಯೋಜನೆಗಳೊಂದಿಗೆ ವಿಶೇಷವಾದ ಆನ್‌ಲೈನ್ ಮ್ಯೂಸಿಕ್ ಸ್ಟ್ರೀಮಿಂಗ್ ಸಿಸ್ಟಮ್ ಅನ್ನು ಒದಗಿಸುತ್ತದೆ.

ಹೊಸದಾಗಿ ಬಿಡುಗಡೆಯಾದ ಚಲನಚಿತ್ರ ಗೀತೆಗಳನ್ನು ಸ್ಟ್ರೀಮಿಂಗ್ ಮಾಡುವುದರ ಜೊತೆಗೆ, ಸ್ಥಳೀಯ ಜಾನಪದ ಮತ್ತು ಪ್ರಾದೇಶಿಕ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲ ಸಂಗೀತವನ್ನು ತಯಾರಿಸಲು ಕಟ್ಟೆ ಆಡಿಯೋ ಉದ್ದೇಶಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ