ಕ್ಯಾನ್ಸರ್ ಪೀಡಿತರಿಗೆ ನೆರವಿಗೆ ಕೊಡುಗೆ ನೀಡುವ ಉದ್ದೇಶದಿಂದ ಸಂಗೀತ ಮತ್ತು ಫ್ಯಾಷನ್ ಶೋ ಕಾರ್ಯಕ್ರಮ

Feb 03: ಕ್ಯಾನ್ಸರ್‌ ಪೀಡಿತರಿಗೆ ನೆರವಿಗೆ ಕೊಡುಗೆ ನೀಡುವ ಉದ್ದೇಶದಿಂದ ಸಂಗೀತ ಮತ್ತು ಫ್ಯಾಷನ್ ಶೋ ಕಾರ್ಯಕ್ರಮ

ರೇಡಿಯೋ ಸಾದರಪಡಿಸಲಿರುವ ಅಮೆರಿಕ ನ್ ಇಂಡಿಯನ್ ಹದಿಹರೆಯದ ಪಾಪ್ ಹಾಡುಗಾರ್ತಿ ಹಿತಾ ಅವರಿಂದ ಇನ್ಸ್ಪೈರ್ ಸಂಗೀತ ಕಚೇರಿ ಯನ್ನು ಆಯೋಜಿಸಲಾಯಿತು.

ಫೆಮ್ಮೆ ಪ್ರೈಡ್ ಆಫ್ ಇಂಡಿಯಾ ದಿವ್ಯಾಂಶು ನಹರ್ ಇದನ್ನು ಸಾದರಪಡಿಸುತ್ತಿದ್ದು ಮಿರಾಯ ಗ್ರೀನ್ಸ್ ಬೆಂಬಲ ನೀಡಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಫ್ಯಾಶನ್ ಪ್ರತಿಭೆಗಳಿಗೆ ವೇದಿಕೆ‌ ನೀಡಲು ಅಲ್ಲದೆ ಅವರ ಸಿನಿಮಾ ಜಗತ್ತಿನಲ್ಲಿ ಅವಕಾಶ ಪಡೆಯಲು ನೆರವಾಗಲು ಈ ಕಾರ್ಯಕ್ರಮ ನಡೆಸಲಾಯಿತು.

ಪಾಪ್ ಸಿಂಗರ್ ಹಿತಾ ಮತ್ತು ದಿವ್ಯಾಂಶು ನಹರ್ ಅವರು ಸರ್ಕಾರೇತರ ಸಂಸ್ಥೆ ಅಲಯನ್ಸ್ ಗೆ ಬೆಂಬಲ ನೀಡಲು ಈ ಉಪಕ್ರಮ ಕೈಗೊಂಡಿದ್ದರು.

ಜ್ಯೋತಿ ಶರ್ಮ, ಜ್ಯೋತ್ಸ್ನ, ಶಿವಕುಮಾರ್, ಯೋಗೇಂದ್ರನ್ ಮತ್ತು ಅನೇಕ ಜನರು ಕಾರ್ಯಕ್ರಮ ವೀಕ್ಷಿಸಿದರು.

ಫೆಮ್ಮೆನ ನಿರ್ದೇಶಕರಾದ ಕಶಿಶ್ ಜೈನ್ ಅವರು ಮಾತನಾಡಿ, “ಪ್ರತಿ ಬ್ರಾಂಡ್ಗೆ  ರೂಪದರ್ಶಿಗಳು, ಸಾಹಿತ್ಯದ ನೂತನ ಪದಗಳ ಅಗತ್ಯ  ಇರುತ್ತದೆ. ಅನೇಕ ಮಾಡೆಲ್ಗಳು ಮತ್ತು ಗಾಯಕ, ಗಾಯಕಿಯರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಫೆಮ್ಮೆ ಅವರಿಗೆ ಸೇತುವೆ ನಿರ್ಮಿಸುತ್ತಿದೆ. ಫೆಮ್ಮೆಯ ಪ್ರತಿ ಪ್ರದರ್ಶನ ಒಂದು ಉದ್ದೇಶಕ್ಕೆ ಕೊಡುಗೆ ನೀಡುತ್ತದೆ. ಈ ಬಾರಿ ಕ್ಯಾನ್ಸರ್ ಉದ್ದೇಶಕ್ಕೆ ಕೊಡುಗೆ ನೀಡಲಾಗುತ್ತಿದ್ದು, ಕಾರ್ತಿಕ್ ಸುಬ್ಬಯ್ಯ ಇದಕ್ಕೆ ಬೆಂಬಲ ನೀಡಿದ್ದಾರೆ” ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ