ಡ್ರಗ್ ಪಟ್ಟಿಯಿಂದ ತೆಗೆಯುವ ಭರವಸೆ ಅಡಕೆ ಎಂದಿಗೂ ಮಾದಕ ವಸ್ತುವಲ್ಲ

Betel nuts over white background

ಶಿರಸಿ: ಅಡಕೆಗೆ ಯಾವುದೇ ಮಾದಕವಸ್ತು ಬಳಕೆ ಮಾಡದಿದ್ದರೆ ಅದು ಉತ್ತಮ ಉತ್ಪನ್ನವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು.

ನಗರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಭಾನುವಾರ ಆಗಮಿಸಿದ್ದ ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಡಕೆಯನ್ನು ಡ್ರಗ್ ಪಟ್ಟಿಗೆ ಸೇರಿಸಿರುವುದು ಸರಿಯಲ್ಲ. ಅದನ್ನು ಸರಿಪಡಿಸುವುದಾಗಿ ಸರ್ಕಾರ ಈಗಾಗಲೇ ಭರವಸೆ ನೀಡಿದೆ ಎಂದರು.

ಮಾದರಿ ಕ್ಷೇತ್ರ ನಿರ್ಮಿಸಲು ಚಿಂತನೆ:
ರಾಜ್ಯದಲ್ಲಿ ಮಾದರಿ ಆರೋಗ್ಯ ಕ್ಷೇತ್ರ ನಿರ್ಮಿಸಲು ಸರ್ಕಾರ ಮುಂದಾಗಿದೆ. ಶಿರಸಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 250 ಹಾಸಿಗೆಯುಳ್ಳ ಹೈಟೆಕ್ ಆಸ್ಪತ್ರೆ ಕಾಮಗಾರಿಗೆ ತಿಂಗಳೊಳಗೆ ಶಂಕುಸ್ಥಾಪನೆಗೆ ಸೂಚಿಸಲಾಗುವುದು. ಅಗತ್ಯಕ್ಕೆ ಅನುಗುಣವಾಗಿ ತಾಲೂಕಾ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ, ಸಿಬ್ಬಂದಿ ಪೂರೈಸಲು ಕ್ರಮವಹಿಸಲಾಗುವುದು ಎಂದರು.

ಮೂಲ ಸೌಲಭ್ಯ ಕಲ್ಪಿಸುವ ಜೊತೆಗೆ ಹೈಟೆಕ್ ಸಲಕರಣೆಯನ್ನು ವಿತರಿಸಲು ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ