ಹಿಂದುಗಳ ವಿರುದ್ಧ ದ್ವೇಷದ ಪ್ರಚಾರ -ಬಂಧನ ಪಾಸ್ಟರ್ ಪ್ರವೀಣನ ವೀಡಿಯೋ ತೆಗೆದ ಎಚ್‍ಡಿಎಫ್‍ಸಿ ಬ್ಯಾಂಕ್ !

ಹೈದರಾಬಾದ್:ಅನಾಥರಿಗೆ ನೆರವು ನೀಡುವ ವೇಷದಲ್ಲಿ ಮತಾಂತರ ಕೃತ್ಯಗಳಲ್ಲಿ ತೊಡಗಿದ್ದಲ್ಲದೆ, ಇದೀಗ ಹಿಂದುಗಳ ವಿರುದ್ಧ ದ್ವೇಷದ ಪ್ರಚಾರ ನಡೆಸಿ ಬಂಧನಕ್ಕೀಡಾಗಿರುವ ಪ್ರವೀಣ್ ಚಕ್ರವರ್ತಿಯನ್ನು `ನೇಬರ್‍ಹುಡ್ ಹೀರೋ’ಎಂದು ಹೊಗಳುವ ವೀಡಿಯೋವನ್ನು ಎಚ್‍ಡಿಎಫ್‍ಸಿ ಬ್ಯಾಂಕ್ ಕೊನೆಗೂ ತೆಗೆದುಹಾಕಿದೆ.
ಮತಾಂತರಗೊಂಡರೂ ತನ್ನ ಮೂಲ ಹಿಂದು ಹೆಸರನ್ನೇ ಉಳಿಸಿಕೊಂಡು ಆಂಧ್ರದಲ್ಲಿ ಭಾರೀ ಪ್ರಮಾಣದಲ್ಲಿ ಹಿಂದುಗಳನ್ನು ಮತಾಂತರಿಸುವ ಕುಕೃತ್ಯಗಳಲ್ಲಿ ತೊಡಗಿದ್ದ ಪ್ರವೀಣ್ ಚಕ್ರವರ್ತಿ ತೋರಿಕೆಗೆ `ಸೈಲಮ್ ಬ್ಲೈಂಡ್ ಸೆಂಟರ್ ‘ಎಂಬ ಎನ್‍ಜಿಒ ಒಂದನ್ನು ನಡೆಸುತ್ತಿದ್ದು ಭಾರೀ ಪ್ರಚಾರ ಗಿಟ್ಟಿಸಿಕೊಂಡಿದ್ದ.ಆದರೆ ಹಿಂದುಗಳನ್ನು ಬಲವಂತವಾಗಿ ಕ್ರೈಸ್ತ ಮತಕ್ಕೆ ಮತಾಂತರಿಸುತ್ತಿದ್ದ ಈ ದುಷ್ಕರ್ಮಿ ಸೈಲಮ್ ಬ್ಲೈಂಡ್ ಸೆಂಟರ್’ನ ಅಧ್ಯಕ್ಷನಾಗಿದ್ದು, ಹಿಂದು ದೇವರುಗಳ ನಿಂದನೆ, ಭತ್ರ್ಸನೆಯಲ್ಲಿ ತೊಡಗಿದ್ದನು.ಅಷ್ಟೇ ಅಲ್ಲದೆ ಹಿಂದು ದೇವರ ವಿಗ್ರಹಗಳನ್ನು ಒದೆಯುವುದು, ವಿರೂಪಗೊಳಿಸುವುದು ಮತ್ತು ಹಿಂದು ದೇವರ ವಿಗ್ರಹಗಳ ಭಂಜನೆಗೆ ಜನರನ್ನು ಪ್ರಚೋದಿಸುವಂತಹ ಹೀನ ಕೃತ್ಯಗಳನ್ನು ಎಗ್ಗಿಲ್ಲದೆ ನಡೆಸುತ್ತಿದ್ದನು. ಈ ಮತಾಂತರ ಕೃತ್ಯಗಳಿಂದ ಅನೇಕ `ಕ್ರೈಸ್ತ ಗ್ರಾಮ’ಗಳನ್ನೇ ಆಂಧ್ರದಲ್ಲಿ ನಿರ್ಮಿಸಿದ್ದನೀತ.
ಈ ಕುಖ್ಯಾತ ಕ್ರಿಶ್ಚಿಯನ್ ಪಾಸ್ಟರ್ ತನಗೆ ಅಮೆರಿಕದಿಂದ ಭಾರೀ ಪ್ರಮಾಣದಲ್ಲಿ ದೇಣಿಗೆ ಕಳುಹಿಸುವ ವ್ಯಕ್ತಿಗೆ ತಾನು ಹೇಗೆ ಹಿಂದುಗಳನ್ನು ಭಾರೀ ಪ್ರಮಾಣದಲ್ಲಿ ಮತಾಂತರ ಮಾಡುತ್ತಿದ್ದೇನೆ ಮತ್ತು ಕ್ರೈಸ್ತ ಗ್ರಾಮಗಳನ್ನು ನಿರ್ಮಿಸುತ್ತಿದ್ದೇನೆ ಎಂದು ಹೇಳುವ ವೀಡಿಯೋ ದಾಖಲೆಗಳೂ ಬಯಲಿಗೆ ಬಂದ ಬಳಿಕ ಲೀಗಲ್ ರೈಟ್ಸ್ ಎನ್‍ಜಿಒ ಆಗಿರುವ ದ ಲೀಗಲ್ ರೈಟ್ಸ್ ಪೊಟೆಕ್ಷನ್ ಪೊರಂ(ಎಲ್‍ಆರ್‍ಪಿಎಫ್)ಈತನ ಕುಕೃತ್ಯಗಳ ಕುರಿತಂತೆ ಕೇಂದ್ರ ಗೃಹಕಾರ್ಯದರ್ಶಿಯವರು ಮತ್ತು ಗೃಹಸಚಿವಾಲಯದ ಎಫ್‍ಸಿಆರ್‍ಎ ವಿಭಾಗಕ್ಕೆ ದೂರು ಸಲ್ಲಿಸಿತ್ತು.
ಈ ದೂರಿನ ಬಳಿಕ ಆಂಧ್ರ ಪೊಲೀಸ್ ಕ್ರಿಮಿನಲ್ ಇನ್‍ವೆಸ್ಟಿಗೇಶನ್ ಡಿಪಾರ್ಟ್‍ಮೆಂಟ್ (ಸಿಐಡಿ) ಈ ಪಾಸ್ಟರ್‍ನನ್ನು ಕಾಕಿನಾಡದಲ್ಲಿ ಬಂಸಿದೆ. ಈತನನ್ನು ಬಳಿಕ ಗುಂಟೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಈತನ ಬ್ಯಾಂಕ್ ವ್ಯವಹಾರ, ಈತನ ಹೇಳಿಕೆಗಳ ಕುರಿತಂತೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಘಾತಕಾರಿ ಎಂದರೆ ಎಚ್‍ಡಿಎಫ್‍ಸಿ ಬ್ಯಾಂಕ್ ಕಳೆದ ಆಗಸ್ಟ್‍ನಲ್ಲಿ ಈತನನ್ನು `ನೇಬರ್‍ಹುಡ್ ಹೀರೋ’ಎಂದು ಗೌರವಿಸಿ ವೀಡಿಯೋವೊಂದನ್ನು ಯೂಟ್ಯೂಬ್‍ಗೆ ಪೊಸ್ಟ್ ಮಾಡಿತ್ತು.ಆದರೆ ಇದೀಗ ಈತನ ಕೃತ್ಯಗಳು ಬಯಲಾಗುತ್ತಿದ್ದಂತೆಯೇ ಬ್ಯಾಂಕ್ ವೀಡಿಯೋವನ್ನು ತೆಗೆದುಹಾಕಿದೆ.
ಹಿಂದುಗಳನ್ನು ತಾನು ಹೇಗೆ ನೆರವು ನೀಡುವ ಹೆಸರಿನಲ್ಲಿ ಬ್ರೈನ್‍ವಾಷ್ ಮಾಡುತ್ತಿದ್ದೇನೆ ಎಂಬುದನ್ನು ಆತ ವಿವರಿಸಿದ್ದಾನೆ. ಬೈಬಲ್‍ನೊಂದಿಗೆ ಗ್ರಾಮಗಳಿಗೆ ತೆರಳಿ ಕ್ರೈಸ್ತನನ್ನೇ ತಮ್ಮ ರಕ್ಷಕನೆಂಬಂತೆ ನಂಬಿಸುತ್ತೇನೆ, ಬಳಿಕ ಹಿಂದು ದೇವರುಗಳ (ಕಲ್ಲಿನ ದೇವರು, ಗಿಡ , ಮರಗಳನ್ನು ಪೂಜಿಸುವ ಹಿಂದುಗಳನ್ನು ಬೆದರಿಸಿ ಅವುಗಳನ್ನು ತಾನು ಹೇಗೆ ಅವಮಾನಿಸುತ್ತೇನೆ ಎಂದು ಹೇಳುವುದೆಲ್ಲ ಆತನ ವೀಡಿಯೋದಲ್ಲಿ ದಾಖಲಾಗಿದೆ.ಹಾಗೆಯೇ ಆಂಧ್ರದಲ್ಲಿ ಅನೇಕ ಹಿಂದು ದೇವಾಲಯಗಳ ಮೇಲೆ ದಾಳಿ ನಡೆದು ವಿಗ್ರಹಭಂಜನೆಗೈದ ಕೃತ್ಯಗಳ ಬಗೆಗೂ ಈತ ಸಂತಸ ವ್ಯಕ್ತಪಡಿಸಿರುವುದು ವೀಡಿಯೋದಲ್ಲಿ ದಾಖಲಾಗಿದೆ.1989ರಲ್ಲಿ ಅನಾಥರಿಗೆ, ವಿಧವೆಯರಿಗೆ, ವೃದ್ಧರಿಗೆ ನೆರವು ನೀಡುವ ಹೆಸರಿನಲ್ಲಿ ಈತ ಸೈಲಮ್ ಬ್ಲೈಂಡ್ ಸೆಂಟರ್ ಸ್ಥಾಪಿಸಿದ್ದು, ಬಹಿರಂಗದಲ್ಲಿ ಸಮಾಜಸೇವಕನಂತೆ ಮತ್ತು ಹಿಂದುಗಡೆ ಹಿಂದುಗಳ ಮತಾಂತರ ಕೃತ್ಯಗಳಲ್ಲಿ ತೊಡಗಿದ್ದನು.
ತಾನು ಮತ್ತು ತನ್ನ `ಸೈಲಮ್ ಪಾಸ್ಟರ್ ಲೀಗ್’ಗ್ರೂಪ್ 2012ರಲ್ಲಿ 15000, 2013ರಲ್ಲಿ 37000, 2014ರಲ್ಲಿ 2,92,000, 2015ರಲ್ಲಿ 6ಲಕ್ಷಕ್ಕೂ ಅಕ ಹಿಂದುಗಳನ್ನು ಮತಾಂತರಿಸಿದ್ದು, 699 `ಕ್ರೈಸ್ತ ಗ್ರಾಮ’ಗಳನ್ನು ಸ್ಥಾಪಿಸಿದ್ದಾಗಿ ಈತ ಅಮೆರಿಕದ ಡೋನರ್‍ಗೆ ಹೇಳುತ್ತಿರುವ ವೀಡಿಯೋ ಕೂಡಾ ಬಹಿರಂಗಗೊಂಡಿದೆ.ಈ ಮತಾಂತರ ಚಟುವಟಿಕೆ ಈಗಲೂ ಮುಂದುವರಿದಿದೆ .ಈತನ ಮತಾಂತರ ಕೃತ್ಯಗಳಿಗೆ ಅಮೆರಿಕ ಮೂಲದ ಕ್ರೈಸ್ತ ಮಿಷನರಿ ಸಂಸ್ಥೆ ಲೈಫ್ ಪಾಯಿಂಟ್ ಚರ್ಚ್ ಮಿಷನ್ಸ್ ಮಿನಿಸ್ಟ್ರಿಯ ಸಹಭಾಗಿತ್ವ ನೀಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ