ಗೋವಾದ ಬಂಬೋಲಿಮ್ನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಆರೋಗ್ಯ ಸ್ಥಿರವಾಗಿದೆ. ನಿನ್ನೆ ಸಂಜೆ ಕಾರು ಅಪಘಾತದಲ್ಲಿ ಅವರು ಗಾಯಗೊಂಡಿದ್ದರು. ಕೇಂದ್ರ ಆಯುಷ್ ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವರಾದ ನಾಯಕ್ ಅವರನ್ನು ನಿನ್ನೆ ರಾತ್ರಿ ಗೋವಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ನಾಯಕ್ ಅವರ ಪತ್ನಿ ವಿಜಯಾ ಮತ್ತು ಸಹಾಯಕ ದೀಪಕ್ ಮೃತಪಟ್ಟಿದ್ದಾರೆ. ಸಚಿವರ ಕಾಲಿಗೆ ಗಾಯವಾಗಿದ್ದು, ಸಣ್ಣ ಸಶ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವತ್ ಸುದ್ದಿಗಾರಿಗೆ ತಿಳಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಮೋದ್ ಸಾವತ್ ಅವರೊಂದಿಗೆ ಮಾತನಾಡಿ, ಸಚಿವ ಶ್ರೀಪಾದ್ ನಾಯಕ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಸಚಿವ ನಾಯಕ್ ಅವರು ಶೀಘ್ರ ಗುಣಮುಖರಾಗಲೆಂದು ಅವರು ಪ್ರಾರ್ಥಿಸಿದ್ದಾರೆ. ಇದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗೋವಾ ಮುಖ್ಯಮಂತ್ರಿಯೊಂದಿಗೆ ಮಾತನಾಡಿ, ಶ್ರೀಪಾದ್ ನಾಯಕ್ ಅವರ ಚಿಕಿತ್ಸೆಗೆ ಸೂಕ್ತ ಏರ್ಪಾಡುಗಳನ್ನು ಮಾಡುವಂತೆ ಸೂಚಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ನಾಯಕ್ ಅವರ ಪತ್ನಿ ಸಾವಿಗೆ ಸಂತಾಪ ಸೂಚಿಸಿದ್ದು, ನಾಯಕ್ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
Related Articles
ಗೋವಾ: ಹಿರಿಯ ಕಾಂಗ್ರೆಸ್ ನಾಯಕ ಶಾಂತಾರಾಮ್ ನಾಯ್ಕ್ ವಿಧಿವಶ
Seen By: 431 ಪಣಜಿ: ಗೋವಾ ಕಾಂಗ್ರೆಸ್ ನ ಹಿರಿಯ ಮುಖಂಡ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಶಾಂತಾರಾಮ್ ನಾಯ್ಕ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. [more]
ಕರ್ನಾಟಕ ಹಾಗೂ ಗೋವಾ ಎನ್ಸಿಸಿ ತಂಡಕ್ಕೆ ‘ಪ್ರಧಾನಿ ಬ್ಯಾನರ್’ ಪ್ರಶಸ್ತಿ
January 29, 2019
Samachar Network-CLB
ರಾಷ್ಟ್ರೀಯ
Comments Off on ಕರ್ನಾಟಕ ಹಾಗೂ ಗೋವಾ ಎನ್ಸಿಸಿ ತಂಡಕ್ಕೆ ‘ಪ್ರಧಾನಿ ಬ್ಯಾನರ್’ ಪ್ರಶಸ್ತಿ
Seen By: 132 ನವದೆಹಲಿ: ಕರ್ನಾಟಕ ಹಾಗೂ ಗೋವಾ ಎನ್ಸಿಸಿ(ನ್ಯಾಷನಲ್ ಕೆಡೆಟ್ ಕೋರ್) ತಂಡಕ್ಕೆ ಈ ಬಾರಿ ಪ್ರತಿಷ್ಠಿತ ಗಣರಾಜ್ಯೋತ್ಸವ ‘ಪ್ರಧಾನಿ ಬ್ಯಾನರ್’ ಪ್ರಶಸ್ತಿ ಲಭಿಸಿದೆ. ಗಣರಾಜ್ಯೋತ್ಸವದ [more]