ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುವದಿನದ ಅಂಗವಾಗಿ ಎರಡನೇ ರಾಷ್ಟ್ರೀಯ ಯುವಸಂಸತ್ ಉತ್ಸವವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ವಿವೇಕಾನಂದರ ಆಶಯದಂತೆ ಜನರ ಸೇವೆಯಿಂದ ಜಗತ್ತಿನ ಸೇವೆ ಮಾಡಬೇಕು. ವ್ಯಕ್ತಿಯಿಂದ ಸಂಸ್ಥೆ ನಿರ್ಮಾಣ, ಸಂಸ್ಥೆಯಿಂದ ಅನೇಕ ವ್ಯಕ್ತಿಗಳನ್ನು ನಿರ್ಮಾಣ ಮಾಡಬೇಕು ಎಂಬ ಅವರ ಚಿಂತನೆಗಳು ಯುವ ಸಮೂಹಕ್ಕೆ ಪ್ರೇರಣೆಯಾಗಬೇಕು. ರಾಷ್ಟ್ರೀಯ ಯುವ ಸಂಸತ್ ಸಂವಿಧಾನವನ್ನು ರಚಿಸಿದ ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು. ಕೇಂದ್ರದ ನೂತನ ಶಿಕ್ಷಣ ನೀತಿಯಲ್ಲೂ ವಿವೇಕಾನಂದರ ಚಿಂತನೆಗಳಿವೆ. ಹಲವಾರು ವ್ಯಕ್ತಿಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಸ ಶಿಕ್ಷಣ ನೀತಿ ಒಳಗೊಂಡಿದೆ. ಕೇಂದ್ರ ಸರ್ಕಾರ ಯುವಜನತೆಗೆ ಉತ್ತಮ ಅವಕಾಶಗಳನ್ನು ಒದಗಿಸುವ ಪರಿಸರವನ್ನು ನಿರ್ಮಿಸುತ್ತಿದೆ ಎಂದು ನರೇಂದ್ರ ಮೋದಿ ಹೇಳಿದರು. ದೇಶಕ್ಕೆ ವಂಶಾಡಳಿತ ರಾಜಕಾರಣ ಸವಾಲಾಗಿದ್ದು, ಇದನ್ನು ಬೇರು ಸಹಿತ ನಿರ್ಮೂಲನೆ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ಇಡೀ ದೇಶದಲ್ಲಿ ರಾಜ್ಯ ಸರ್ಕಾರಗಳ ಮೂಲಕ ‘ನಿಮ್ಮ ಸಂವಿಧಾನದ ಬಗ್ಗೆ ತಿಳಿಯಿರಿ’ ಎಂಬ ಪ್ರಚಾರಾಂದೋಲನವನ್ನು ನಡೆಸಲು ನಿರ್ಧರಿಸಲಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಮೂವರು ರಾಷ್ಟ್ರಪದಕ ವಿಜೇತರು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. ಕೇಂದ್ರ ಸಚಿವರಾದ ರಮೇಶ್ ಪೋಖ್ರಿಯಾಲ್ ನಿಶಾಂಕ್, ಕಿರಣ್ ರಿಜಿಜು ಮತ್ತಿತರರು ಪಾಲ್ಗೊಂಡಿದ್ದರು.
Related Articles
ನೀತಿ ಆಯೋಗ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು…?
June 17, 2018
Samachar Network-CLB
ರಾಜ್ಯ, ರಾಷ್ಟ್ರೀಯ, ರಾಜಕೀಯ, ಸಿಎಂ ಹೆಚ್ಡಿಕೆ, ಪ್ರಧಾನಿ ಮೋದಿ, ವಾಣಿಜ್ಯ
Comments Off on ನೀತಿ ಆಯೋಗ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು…?
Seen By: 275 ನವದೆಹಲಿ:ಜೂ-17:ದೇಶದ ಆರ್ಥಿಕ ಬೆಳವಣಿಗೆ ದರವನ್ನು ಎರಡಂಕಿಗೆ ಕೊಂಡೊಯ್ಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ [more]
ಪೌರತ್ವ ನೀಡುವ ಪ್ರಕ್ರಿಯೆ ಆರಂಭ ಜನವರಿಯಿಂದ ಸಿಎಎ ಅನ್ವಯ
December 7, 2020
Varta Mitra News - SP
ರಾಷ್ಟ್ರೀಯ, ಪ್ರಧಾನಿ ಮೋದಿ
Comments Off on ಪೌರತ್ವ ನೀಡುವ ಪ್ರಕ್ರಿಯೆ ಆರಂಭ ಜನವರಿಯಿಂದ ಸಿಎಎ ಅನ್ವಯ
Seen By: 52 ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನ್ವಯ 2021ರ ಜನವರಿಯಿಂದ ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶದ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ಪ್ರಕ್ರಿಯೆಯನ್ನು ಬಿಜೆಪಿ [more]
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
February 10, 2019
Samachar Network-CLB
ರಾಷ್ಟ್ರೀಯ
Comments Off on ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
Seen By: 42 ಗುಂಟೂರು: ಪಕ್ಷ ಬದಲಾವಣೆ, ನಂಬಿಕೆ ದ್ರೋಹ ಮಾಡುವುದರಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿಸ್ಸೀಮರು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. [more]