ದೇಶದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಕೆಯ ಪ್ರಮಾಣ ಶೇಕಡ 96.49ಕ್ಕೆ ಏರಿಕೆಯಾಗಿದೆ. ಕಳೆದ 24 ತಾಸಿನಲ್ಲಿ 18 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ 1 ಕೋಟಿ ಒಂದು ಲಕ್ಷಕ್ಕೆ ಏರಿದೆ. ಭಾರತದಲ್ಲಿನ ಚೇತರಿಕೆ ಪ್ರಮಾಣ ವಿಶ್ವದಲ್ಲೇ ಅತ್ಯಧಿಕವಾಗಿದೆ. ಒಟ್ಟು ದೃಢಪಟ್ಟ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ ಶೇಕಡ 2.07ರಷ್ಟಿದ್ದು, ಸದ್ಯ ಈ ಪ್ರಕರಣಗಳ ಸಂಖ್ಯೆ 2 ಲಕ್ಷದ 16 ಸಾವಿರದಷ್ಟಿದೆ. ಕಳೆದ 24 ತಾಸಿನಲ್ಲಿ 12 ಸಾವಿರದ 584 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಒಂದು ಕೋಟಿ 4 ಲಕ್ಷ ದಾಟಿದೆ. ಭಾರತದಲ್ಲಿ ಸೋಂಕಿನಿಂದ ಸಾವಿನ ಪ್ರಮಾಣ ಶೇಕಡ 1.44ರಷ್ಟಿದ್ದು, ಇದು ಜಾಗತಿಕವಾಗಿ ಕನಿಷ್ಠ ಪ್ರಮಾಣವಾಗಿದೆ. ಕಳೆದ 24 ತಾಸಿನಲ್ಲಿ 167 ಮಂದಿ ಸೋಂಕಿನಿಂದ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ ಒಂದು ಲಕ್ಷ 51 ಸಾವಿರದ 327ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ತಾಸಿನಲ್ಲಿ 8 ಲಕ್ಷದ 97 ಸಾವಿರ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರೊಂದಿಗೆ ಈವರೆಗೆ ಪರೀಕ್ಷಿಸಲಾದ ಒಟ್ಟು ಕೋವಿಡ್ ಮಾದರಿಗಳ ಸಂಖ್ಯೆ 18 ಕೋಟಿ 26 ಲಕ್ಷಕ್ಕೆ ಏರಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
Related Articles
ಸದ್ಯ ಶಾಲೆ ತೆರೆಯಲ್ಲ; ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಸಿಎಂ ಬಿಎಸ್ ಯಡಿಯೂರಪ್ಪ
October 9, 2020
Varta Mitra News - SP
ಬೆಂಗಳೂರು, ರಾಷ್ಟ್ರೀಯ, ಸಿಎಂ ಹೆಚ್ಡಿಕೆ
Comments Off on ಸದ್ಯ ಶಾಲೆ ತೆರೆಯಲ್ಲ; ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಸಿಎಂ ಬಿಎಸ್ ಯಡಿಯೂರಪ್ಪ
Seen By: 52 ಬೆಂಗಳೂರು: ಶಾಲೆಗಳನ್ನು ಪುನರ್ ಆರಂಭ ಮಾಡುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ತೀರ್ಮಾನ ಮಾಡಬೇಕು. ಶಾಲೆ ತೆರೆಯಲು ಪೋಷಕರ [more]
ದೇಶದಲ್ಲಿ ಈಗಾಗಲೇ ಆರಂಭವಾಗಿದೆ ಮೂರನೇ ಅಲೆ :ಸಂಶೋಧಕ ಎಚ್ಚರಿಕೆ
July 13, 2021
Varta Mitra News - SP
ರಾಷ್ಟ್ರೀಯ
Comments Off on ದೇಶದಲ್ಲಿ ಈಗಾಗಲೇ ಆರಂಭವಾಗಿದೆ ಮೂರನೇ ಅಲೆ :ಸಂಶೋಧಕ ಎಚ್ಚರಿಕೆ
Seen By: 56 ಹೈದರಾಬಾದ್: ಕೊರೋನಾ ಎರಡನೇ ಅಲೆಯ ತೀವ್ರತೆ ತಗುತ್ತಿದ್ದು, ಈಗ ಮೂರನೇ ಅಲೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ, ಈ ಮೂರನೇ ಅಲೆಗೆ ಜುಲೈ 4ರಂದೇ [more]
ಭಾರತದಲ್ಲಿ ತಯಾರಿಸಲಾಗಿರುವ ಕೋವಿಡ್-19 ಎರಡು ಲಸಿಕೆಗಳಿಂದ ವಿಶ್ವದ ಮನುಕುಲವನ್ನು ಸಂರಕ್ಷಿಸಲು ಭಾರತ ಸಜ್ಜಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ
January 11, 2021
Varta Mitra News - SP
ರಾಷ್ಟ್ರೀಯ, ಪ್ರಧಾನಿ ಮೋದಿ, ಆರೋಗ್ಯ
Comments Off on ಭಾರತದಲ್ಲಿ ತಯಾರಿಸಲಾಗಿರುವ ಕೋವಿಡ್-19 ಎರಡು ಲಸಿಕೆಗಳಿಂದ ವಿಶ್ವದ ಮನುಕುಲವನ್ನು ಸಂರಕ್ಷಿಸಲು ಭಾರತ ಸಜ್ಜಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ
Seen By: 48 ಭಾರತದಲ್ಲಿ ತಯಾರಿಸಲಾಗಿರುವ ಕೋವಿಡ್-19 ಎರಡು ಲಸಿಕೆಗಳಿಂದ ವಿಶ್ವದ ಮನುಕುಲವನ್ನು ಸಂರಕ್ಷಿಸಲು ಭಾರತ ಸಜ್ಜಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಮೇಡ್ ಇನ್ [more]