ಬರ್ಲಿನ್: ಜರ್ಮನಿಯಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮ ಆರಂಭವಾಗಿದ್ದು, 101 ವರ್ಷದ ಮಹಿಳೆ ಫೈಜರ್- ಬಯೋಎನ್ಟೆಕ್ ಸಂಸ್ಥೆಯ ಲಸಿಕೆ ಪಡೆದ ದೇಶದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಜರ್ಮನಿಯ ಸ್ಯಾಕ್ಸನಿ- ಆ್ಯನ್ಹಾಲ್ಟ್ ರಾಜ್ಯದ ಆರೈಕೆ ಕೇಂದ್ರದಲ್ಲಿ ದಾಖಲಾಗಿರುವ 40 ನಿವಾಸಗಳು ಹಾಗೂ 10 ಸಿಬ್ಬಂದಿ ಪೈಕಿ ಎಡಿತ್ ಕ್ವೋಯ್ಜಲ್ಲಾ ಕೂಡ ಒಬ್ಬರಾಗಿದ್ದು, ಚುಚ್ಚುಮದ್ದು ರೂಪದಲ್ಲಿ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.
ಈ ಕುರಿತಂತೆ ಜರ್ಮನಿ ಆರೋಗ್ಯ ಸಚಿವ ಜೆನ್ಸ್ ಸ್ಪಾನ್ ಮಾತನಾಡಿ, ಟ್ರಕ್ಗಳು ದೇಶದ ಮೂಲೆ ಮೂಲೆಗೆ ಲಸಿಕೆ ತಲುಪಿಸಲು ಕಾರ್ಯಾರಂಭಿಸಿವೆ ಎಂದು ತಿಳಿಸಿದ್ದಾರೆ.
ಶನಿವಾರ 10 ಸಾವಿರಕ್ಕೂ ಅಕ ಲಸಿಕೆ ಡೋಸ್ಗಳನ್ನು ಪ್ರಾದೇಶಿಕ ಆರೋಗ್ಯ ಪ್ರಾಕಾರಗಳಿಗೆ ವಿತರಿಸಲಾಗಿದ್ದು, ಇವು ನಂತರ ಸ್ಥಳೀಯ ಲಸಿಕೆ ಕೇಂದ್ರಗಳಿಗೆ ಲಸಿಕೆ ತಲುಪಿಸಿವೆ.
80 ವರ್ಷದ ದಾಟಿದ ಸೋಂಕಿತರಿಗೆ, ಆರೋಗ್ಯ ಸಿಬ್ಬಂದಿಗೆ ಮೊದಲು ಲಸಿಕೆ ನೀಡಲಾಗುತ್ತಿದ್ದು, ಡಿಸೆಂಬರ್ನೊಳಗೆ 1.3 ದಶಲಕ್ಷ ಲಸಿಕೆ ಡೋಸ್ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅಂತೆಯೇ ಜನವರಿಯಿಂದ ಪ್ರತಿ ವಾರ ಸುಮಾರು 7 ಲಕ್ಷ ಡೋಸ್ ಲಸಿಕೆ ವಿತರಿಸುವ ಧ್ಯೇಯ ಸರ್ಕಾರಕ್ಕಿದೆ. ಒಮ್ಮೆ ವೃದ್ಧ ಸೋಂಕಿತರಿಗೆ, ಆರೋಗ್ಯ ಸಿಬ್ಬಂದಿಗೆ ಲಸಿಕೆ ವಿತರಿಸಿದ ಬಳಿಕ, ಅಂದರೆ 2021ರ ಮಧ್ಯ ಭಾಗದಿಂದ ದೇಶದ ಸರ್ವರಿಗೂ ಲಸಿಕೆ ವಿತರಿಸುವ ಕಾರ್ಯ ಆರಂಭವಾಗಲಿದೆ.