ಶಸ್ತ್ರಸಹಿತ 8ಗುಂಪುಗಳ ನೂರಾರು ಉಗ್ರರು ಶರಣು ಈಶಾನ್ಯದಲ್ಲಿ ಕಳೆದ 6ವರ್ಷಗಳಲ್ಲಿ ತಗ್ಗಿದ ಹಿಂಸೆ:ಗೃಹಸಚಿವ ಅಮಿತ್ ಶಾ ಸಂತಸ

ಇಂಫಾಲ : ಕಳೆದ ಕೆಲವು ದಶಕಗಳಿಂದ ಸತತ ಹಿಂಸಾಚಾರ, ಪ್ರತ್ಯೇಕತಾವಾದಗಳಿಂದ ಅಶಾಂತಿಯ ಕೂಪವಾಗಿದ್ದ ಈಶಾನ್ಯರಾಜ್ಯಗಳಲ್ಲಿ ಕಳೆದ ಆರು ವರ್ಷಗಳಿಂದ ಹಿಂಸೆ ತಗ್ಗಿರುವ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದಡಿ ಈಗ ಈಶಾನ್ಯ ರಾಜ್ಯಗಳು ಅಭಿವೃದ್ಧಿಯ ಹೊಸ ಶಕೆಯನ್ನು ಕಾಣುತ್ತಿರುವುದು ಕೂಡಾ ಸಂತಸದ ವಿಷಯ ಎಂದು ಅವರು ಹೇಳಿದ್ದಾರೆ.
ಮಣಿಪುರ ರಾಜಧಾನಿ ಇಂಫಾಲದಲ್ಲಿ ಭಾನುವಾರ ಮಾತನಾಡಿದ ಶಾ ಅವರು, ಈಶಾನ್ಯದ 8 ಉಗ್ರವಾದಿ ಗುಂಪುಗಳ 644ಕ್ಕೂ ಅಕ ಬಂಡುಕೋರರು 2,500ಕ್ಕೂ ಅಕ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿ ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಬೆರೆಯಲು ಮುಂದಾಗಿರುವುದು ಗಮನಾರ್ಹ ಅಂಶವೆಂದರು. ಅಮಿತ್ ಶಾ ಅವರು ಮೂರು ದಿನಗಳ ಈಶಾನ್ಯ ಪ್ರವಾಸದಲ್ಲಿದ್ದಾರೆ. ಶನಿವಾರ ಅವರು ಅಸ್ಸಾಮಿಗೆ ಭೇಟಿ ನೀಡಿದ್ದು ಹಲವು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಿ ಚಾಲನೆ ನೀಡಿದ್ದಾರೆ. ಹಾಗೆಯೇ ವಿಶ್ವವಿಖ್ಯಾತ ಕಾಮಾಕ್ಷಿ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ,ಪ್ರಾರ್ಥನೆಗಳನ್ನು ಸಲ್ಲಿಸಿದ್ದರು.
ಈ ವರೆಗೆ ಈಶಾನ್ಯದ ರಾಜ್ಯಗಳೆಂದರೆ ಹಿಂಸೆ , ಪ್ರತ್ಯೇಕತಾವಾದಗಳೇ ಮನಸ್ಸಿಗೆ ಬರುತ್ತಿದ್ದಂಥದ್ದು. ಆದರೆ ಕಳೆದ 6ವರ್ಷಗಳಲ್ಲಿ ಅಲ್ಲಿನ ಚಿತ್ರಣವೇ ಬದಲಾಗಿದೆ. ಬಹುತೇಕ ಎಲ್ಲ ಸಶಸ್ತ್ರ ಬಂಡುಕೋರ ಗುಂಪುಗಳು ಒಂದರ ಹಿಂದೊಂದರಂತೆ ಶಸ್ತ್ರಾಸ್ತ್ರ ಗಳನ್ನು ಕೆಳಗಿಟ್ಟು ಶರಣಾಗುತ್ತಿವೆ. ಹಿಂಸಾಚಾರ ಕಡಿಮೆಯಾಗಿದೆ ಎಂದು ಅವರು ನುಡಿದರು. ಈ ಸಂದರ್ಭ ಅವರು ಮಣಿಪುರದ ಹಪ್ತಾ ಕಾಂಗಜೀಬುಂಗ್‍ನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದರಲ್ಲದೆ, ಕೆಲವು ಯೋಜನೆಗಳನ್ನು ಉದ್ಘಾಟಿಸಿದರು. ಇವುಗಳಲ್ಲಿ ಮಣಿಪುರದ ಚುರಾಚಂದ್‍ಪುರದಲ್ಲಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ, ಇಂಫಾಲ್‍ನಲ್ಲಿ ರಾಜ್ಯ ಸರಕಾರದ ಅತಿಥಿಗೃಹ, ಮುವಾಂಗ್‍ಕಾಂಗ್‍ನಲ್ಲಿ ಐಐಟಿಗೆ ಶಿಲಾನ್ಯಾಸ, ಇಂಫಾಲದಲ್ಲಿ ರಾಜ್ಯ ಪೆÇಲೀಸ್ ಕೇಂದ್ರ ಕಚೇರಿ, ಇಂಟಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಸಿಟಿ ಮತ್ತಿತರ ಯೋಜನೆಗಳು ಸೇರಿವೆ.
ಈಶಾನ್ಯದ ಕುಸಿತಕ್ಕೆ ಕಾಂಗ್ರೆಸ್ ಕೊಡುಗೆ
ಪ್ರಧಾನಿ ಮೋದಿಯಿಂದ ಅಭಿವೃದ್ಧಿ ಶಕೆ
ಪ್ರಧಾನಿ ಮೋದಿಜಿಯವರು ಈಶಾನ್ಯವನ್ನು ತಮ್ಮ ಹೃದಯದಲ್ಲಿಟ್ಟುಕೊಂಡಿದ್ದಾರೆ. ಪರಿಣಾಮ ಈಶಾನ್ಯ ರಾಜ್ಯಗಳತ್ತ ಅಭಿವೃದ್ಧಿ ಯೋಜನೆಗಳ ಮಹಾಪೂರವೇ ಹರಿದುಬರುತ್ತಿದೆ.ಈ ಮೂಲಕ ಕೇಂದ್ರದ ಬಿಜೆಪಿ ಸರಕಾರವು ಈಶಾನ್ಯ ಎಂದರೆ ಅಭಿವೃದ್ಧಿಯ ಹೊಸ ಬಿಂಬವನ್ನೇ ಸೃಷ್ಟಿಸಿದೆ ಎಂದರು.ಈ ಹಿಂದೆ ಕಾಂಗ್ರೆಸ್ ಅನೇಕ ದಶಕಗಳ ಕಾಲ ಆಳಿದರೂ ಈಶಾನ್ಯದ ರಾಜ್ಯಗಳನ್ನು ನಿರ್ಲಕ್ಷಿಸಿ ಹಿಂದುಳಿಯುವಂತೆ ಮಾಡಿತ್ತು .ಕಳೆದ 3ವರ್ಷಗಳಲ್ಲಿ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ನೇತೃತ್ವದ ಸರಕಾರ ಮಣಿಪುರವನ್ನು ಅಭಿವೃದ್ಧಿಯ ಹೊಸ ದಿಕ್ಕಿನತ್ತ ಸಾಗುವಂತೆ ಮಾಡಿದೆ. ಇನ್ನರ್ ಲೈನ್ ಪರ್ಮಿಟ್(ಐಎಲ್‍ಪಿ) ಪ್ರಧಾನಿ ಮೋದಿಯವರು ಮಣಿಪುರಕ್ಕೆ ನೀಡಿದ ಬಹುದೊಡ್ಡ (2019ರ ಡಿ.11ಕ್ಕೆ)ಕೊಡುಗೆ. ಇದು ಕೂಡಾ ಕೇಳದೆಯೇ ನೀಡಿದ ಕೊಡುಗೆ .ಇದರಿಂದಾಗಿ ಇತರ ರಾಜ್ಯಗಳ ಗಡಿಗಳು ಆವರಿಸಿರುವ ರಾಜ್ಯಗಳ ಜನತೆಗೆ ಆಗುತ್ತಿದ್ದ ಅನ್ಯಾಯ ನಿವಾರಣೆಯಾದಂತಾಗಿದೆ . ಹಾಗೆಯೇ ಈ ಹಿಂದೆ ನಿರಂತರ ದಿಗ್ಬಂಧನಗಳಿಂದಾಗಿ ಮಣಿಪುರದ ಜನತೆ ಅಗತ್ಯ ವಸ್ತುಗಳ ಕೊರತೆಗೆ ಸಿಲುಕಿ ಬವಣೆ ಪಡುತ್ತಿದ್ದುದೂ ಈಗ ನಿವಾರಣೆಯಾಗಿದೆ.ಕಳೆದ 3ವರ್ಷಗಳಲ್ಲಿ ಇಲ್ಲಿ ಯಾವುದೇ ದಿಗ್ಬಂಧನ, ಬಂದ್‍ಗಳಿಲ್ಲ ಎಂದು ಅಮಿತ್ ಶಾ ಬೊಟ್ಟು ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ