ಇಟಾನಗರ: ಅರುಣಾಚಲಪ್ರದೇಶದಲ್ಲಿ ಸಂಯುಕ್ತ ಜನತಾದಳಕ್ಕೆ ಮಹತ್ವದ ಹಿನ್ನಡೆಯಾಗಿದ್ದು ಅದರ ಏಳು ಶಾಸಕರ ಪೈಕಿ ಆರು ಮಂದಿ ಆಡಳಿತಾರೂಢ ಬಿಜೆಪಿಗೆ ತಮ್ಮ ನಿಷ್ಠೆ ವ್ಯಕ್ತಪಡಿಸಿರುವುದಾಗಿ ರಾಜ್ಯ ವಿಧಾನಸಭೆಯ ಮಾಹಿತಿ ಪತ್ರ ತಿಳಿಸಿದೆ.
ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ ಪಕ್ಷದ ಏಕೈಕ ಶಾಸಕ, ಲಿಕಾಬಾಲಿ ಕ್ಷೇತ್ರದ ಕಾರ್ಡೊ ನೈಗ್ಯೊಯೊರ್ ಸಹ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಜೆಡಿಯುನಿಂದ ಬಿಜೆಪಿಗೆ ಸೇರ್ಪಡೆಗೊಂಡವರು: ರೂಮ್ಗೊಂಗ್ ಕ್ಷೇತ್ರದ ತಲೆಮ್ ತಾಬೊಹ್, ಹಯೆಂಗ್ ಮಂಗಿ (ಚಾಯಾಂಗ್ ತಾಜೊ ಕ್ಷೇತ್ರ), ಜಿಕ್ಕೆ ತಾಕೊ (ತಾಲಿ ), ದೊರ್ಜಿ ವಾಂಗ್ಡಿ ಖಾರ್ಮಾ (ಕಲಾಕ್ತಾಂಗ್), ದೊಂಗ್ರೂ ಸಿಯೊಂಗ್ಜು (ಬೊಮ್ಡಿಲಾ) ಮತ್ತು ಕಂಗ್ಗೊಂಗ್ ತಾಕು (ಮರಿಯಾಂಗ್ ಜೆಕು).