ಶ್ರೀನಗರ :ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ನಡೆದ ಮೊದಲ ಸ್ಥಳೀಯ ಚುನಾವಣೆಯಲ್ಲಿ ಜನರು ಭಾರತ ಸರಕಾರ ವಿರುದ್ಧದ ಎಲ್ಲ ಅಪಪ್ರಚಾರಗಳ ಹೊರತಾಗಿಯೂ ಅತ್ಯುತ್ಸಾಹದಿಂದ ಭಾಗಹಿಸಿದರು.ಇದೀಗ ಫಲಿತಾಂಶ ಹೊರ ಬಂದಿದ್ದು, ಬಿಜೆಪಿ ಏಕೈಕ ಬೃಹತ್ `ಪಕ್ಷ’ವಾಗಿ ಹೊರಹೊಮ್ಮಿ ಇತಿಹಾಸ ಸೃಷ್ಟಿಸಿದೆ. ಬಿಜೆಪಿಯ ಸ್ಪರ್ಧೆಯಿಂದ ಆತಂಕಗೊಂಡ ನ್ಯಾಷನಲ್ ಕಾನರೆನ್ಸ್, ಪಿಡಿಪಿ, ಕಮ್ಯುನಿಸ್ಟರು ಮತ್ತಿತರ ಪಕ್ಷಗಳೆಲ್ಲ ಒಟ್ಟಾಗಿ ಸ್ರ್ಪಸಿದ ಹೊರತಾಗಿಯೂ ಬಿಜೆಪಿ ಈ ಸಾಧನೆ ಮಾಡಿರುವುದು ಒಂದೆಡೆಯಾದರೆ, ಕಾಶ್ಮೀರ ಕಣಿವೆಯಲ್ಲೂ ಬಿಜೆಪಿ ಪ್ರಭಾವಿಯಾಗಿ ನೆಲೆಕಂಡುಕೊಂಡಿರುವುದು ಈ ಕೂಟದಲ್ಲಿ ಇನ್ನಷ್ಟು ತಲ್ಲಣವುಂಟು ಮಾಡಿದೆ.
ಪಾಕಿಸ್ತಾನ ಪ್ರೇರಿತ ಉಗ್ರ ಚಟುವಟಿಕೆ, ಹಿಂಸಾಚಾರದ ಬೆದರಿಕೆಯ ಹೊರತಾಗಿಯೂ ಜಮ್ಮು – ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಜನರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ್ದಾರೆ.ಜಮ್ಮು ಪ್ರದೇಶದಲ್ಲಿ ಪಾರಮ್ಯ ಮೆರೆದ ಬಿಜೆಪಿ ಕಾಶ್ಮೀರ ಕಣಿವೆಯಲ್ಲೂ 3ಸ್ಥಾನಗಳನ್ನು ಪಡೆದಿದೆ. ಬಿಜೆಪಿಯನ್ನು ಮುಸ್ಲಿಮರು ಬೆಂಬಲಿಸುವುದಿಲ್ಲ ಎಂದು ನಿರಂತರ ಪ್ರಚಾರ ನಡೆಸುತ್ತಲೇ ಬಂದಿದ್ದ ಮಾಧ್ಯಮವರ್ಗಕ್ಕೂ ಬಿಜೆಪಿ ಸಾಧನೆ ಅಚ್ಚರಿ ತಂದಿದೆ.ಬಿಜೆಪಿಗೆ ಕಾಶ್ಮೀರ ಕಣಿವೆಯಲ್ಲಿ ಪ್ರವೇಶ ಸಿಗಬಾರದೆಂಬ ಉಳಿದೆಲ್ಲ ಪಕ್ಷಗಳ ಯತ್ನವನ್ನು ಕಾಶ್ಮೀರ ಕಣಿವೆ ಮತದಾರರು ವಿಫಲಗೊಳಿಸಿರುವುದು ಕುತೂಹಲ ಮೂಡಿಸಿದೆ.
ಬಿಜೆಪಿ ಇಲ್ಲಿ ಏಕಾಂಗಿಯಾಗಿ ಸ್ರ್ಪಸಿ ಕಾಶ್ಮೀರ ಕಣಿವೆಯಲ್ಲಿ ಕೂಡಾ ನೆಲೆ ಕಂಡುಕೊಂಡು ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆ, ಸೆಂಟ್ರಲ್ ಕಾಶ್ಮೀರದ ಶ್ರೀನಗರ ಜಿಲ್ಲೆಮತ್ತು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿತಲಾ ಒಂದೊಂದು ಸ್ಥಾನವನ್ನು ಗೆದ್ದುಕೊಂಡಿದೆ. ವಾಸ್ತವದಲ್ಲಿ ಈ ಪ್ರದೇಶಗಳಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಒಂದು ವೇಳೆ ಗುಪ್ಕರ್ ಕೂಟದ ಪಕ್ಷಗಳು ಪ್ರತ್ಯೇಕವಾಗಿ ಸ್ರ್ಪಸಿದ್ದೇ ಆದರೆ ಪರಿಸ್ಥಿತಿ ಇನ್ನೂ ಬೇರೆಯೇ ಆಗುತ್ತಿತ್ತು.ಇದನ್ನು ಅರಿತೇ ಈ ಪಕ್ಷಗಳೆಲ್ಲ ಒಟ್ಟಾಗಿ ಕೂಟ ರಚಿಸಿಕೊಂಡಿರುವುದು ಎಂದು ವಿಶ್ಲೇಷಿಸಲಾಗಿದೆ.
ಅಲ್ಲದೆ ಅನೇಕ ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಸಿದ್ದು ,ಇವರಲ್ಲೂ ಅನೇಕರು ಬಿಜೆಪಿ ಬೆಂಬಲದಿಂದ ಗೆದ್ದಿದ್ದಾರೆ ಎಂಬುದು ಕೂಡಾ ವಿಶೇಷ. 370ನೇ ವಿ ರದ್ದುಪಡಿಸಿರುವುದರಿಂದ ಜಮ್ಮು-ಕಾಶ್ಮೀರ ಜನರು ಬಿಜೆಪಿಗೆ ಅವಕಾಶ ನೀಡಬಾರದು ಎಂಬ ಪ್ರಚಾರವನ್ನೂ ಗುಪ್ಕರ್ ಕೂಟ ಜೋರಾಗಿಯೇ ನಡೆಸಿದರೂ ಜಮ್ಮು-ಕಾಶ್ಮೀರ ಜನರು ಬಿಜೆಪಿಯನ್ನು ಅತಿದೊಡ್ಡ ಪಕ್ಷವಾಗಿ ಮೂಡಿಬರುವಂತೆ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಪ್ರೇರಿತ ಭಯೋತ್ಪಾದಕರು ಈ ಚುನಾವಣೆ ಸಂದರ್ಭ ಹಿಂಸಾಚಾರ ನಡೆಸಲು ಮತ್ತು ಬಿಜೆಪಿ ವಿರುದ್ಧ ವ್ಯಾಪಕ ಅಪಪ್ರಚಾರ ನಡೆಸಿದರೂ ಬಿಜೆಪಿ ಈ ಸಾಧನೆ ಮಾಡಿರುವುದು ವಿಶೇಷ ಎಂಬುದಾಗಿ ವಿಶ್ಲೇಷಕರು ಬೊಟ್ಟು ಮಾಡಿದ್ದಾರೆ.
ದೇಶದ ಬೇರೆ ಬೇರೆ ಭಾಗಗಳಲ್ಲಿ ಬಿಜೆಪಿ ವಿರೋಗಳೆಲ್ಲ ಒಟ್ಟಾಗಿ ಕೂಟ ರಚಿಸಿಕೊಳ್ಳುತ್ತಿದ್ದರೂ ಬಿಜೆಪಿ ಗೆಲುವಿನ ಅಭಿಯಾನ ಮುಂದುವರಿದಿರುವುದು ಇತ್ತೀಚಿನ ಬಿಹಾರ ಚುನಾವಣೆ ಸೇರಿದಂತೆ ವಿವಿಧ ಚುನಾವಣೆಗಳಿಂದ ವ್ಯಕ್ತವಾಗಿದ್ದು, ಇದೀಗ ಕಾಶ್ಮೀರ ಚುನಾವಣೆ ಇದಕ್ಕೆ ಹೊಸ ಸೇರ್ಪಡೆ.ಬಿಜೆಪಿ ಮುಸ್ಲಿಮ್ ವಿರೋ ಎಂದು ಸತತ ಪ್ರಚಾರ ನಡೆಸಲಾಗುತ್ತಿರುವ ಹೊರತಾಗಿಯೂ ದೇಶದ ವಿವಿಧೆಡೆ ಮುಸ್ಲಿಮರು ಕೂಡಾ ಬಿಜೆಪಿಯತ್ತ ಕ್ರಮೇಣ ವಾಲುತ್ತಿರುವುದು ವಿರೋಗಳಲ್ಲಿ ಚಿಂತೆಗೆ ಕಾರಣವಾಗಿದೆ.