ಲಂಡನ್:ಬ್ರಿಟನ್ನಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಹೊಸ ಸ್ವರೂಪದಲ್ಲಿ ಆತಂಕಕಾರಿ ರೀತಿಯಲ್ಲಿ ಹರಡಲಾರಂಭಿಸಿದ್ದು, ಪರಿಸ್ಥಿತಿ ಕೈಮೀರಿದೆ ಎಂಬುದಾಗಿ ಬ್ರಿಟನ್ ಸರಕಾರವೇ ಕೈಚೆಲ್ಲಿದೆ.ಇದೀಗ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಿಸ್ಮಸ್ ಆಚರಣೆಯ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಸೇರಿದಂತೆ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಈಗಾಗಲೇ ಅನೇಕ ದೇಶಗಳು ಬ್ರಿಟನ್ನಿಂದ ವಿಮಾನಸಂಚಾರವನ್ನು ನಿರ್ಬಂಸಿವೆ.
ದುರದೃಷ್ಟವಶಾತ್,ಹೊಸದಾಗಿ ಕೋವಿಡ್-19 ಸೋಟಗೊಂಡಿದ್ದು, ಪರಿಸ್ಥಿತಿ ಕೈ ಮೀರಿದೆ ಎಂಬುದಾಗಿ ಬ್ರಿಟನ್ನ ಆರೋಗ್ಯ ಕಾರ್ಯದರ್ಶಿ ಮ್ಯಾಟ್ಹನ್ಕಾಕ್ ಅವರೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಲಂಡನ್ ಮತ್ತು ಆಗ್ನೇಯ ಇಂಗ್ಲೆಂಡ್ ಭಾಗಗಳಲ್ಲಿ ಕ್ರಿಸ್ಮಸ್ ಲಾಕ್ಡೌನನ್ನು ಕಟ್ಟುನಿಟ್ಟಾಗಿ ಜಾರಗೆ ತರಲಾಗುವುದು ಎಂಬುದಾಗಿ ತಿಳಿಸಿದ್ದಾರೆ.ಇಂಗ್ಲೆಂಡ್ನ ಮೂರನೇ ಒಂದರಷ್ಟು ಜನರು ಕೊರೋನಾ ಲಸಿಕೆ ಪೂರ್ಣವಾಗಿ ವಿತರಣೆಯಾಗುವವರೆಗೆ ಹೊರಗಡೆ ಬರದೆ ಮನೆಗಳಲ್ಲೇ ಉಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕೂಡಾ ದೇಶದ ಮಿಲಿಯಗಟ್ಟಲೆ ಜನರು ತಮ್ಮ ಕ್ರಿಸ್ಮಸ್ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮನೆಗಳಲ್ಲೇ ಉಳಿದುಕೊಳ್ಳಬೇಕು ಎಂಬುದಾಗಿ ಈಗಾಗಲೇ ಕರೆ ನೀಡಿದ್ದಾರೆ.ನಿಯಮ ಉಲ್ಲಂಘಿಸಿ ಹೊರಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಸರಕಾರ ಎಚ್ಚರಿಸಿದೆ.
ಈ ನಡುವೆ ಬ್ರೆಜಿಲ್ ಮತ್ತಿತರ ದೇಶಗಳು ಬ್ರಿಟನ್ನಿಂದ ಬರುವ ವಿಮಾನಗಳ ಸಂಚಾರವನ್ನು ನಿರ್ಬಂಸಿವೆ. ಭಾರತವೂ ಬ್ರಿಟನ್ನಲ್ಲಿನ ಪರಿಸ್ಥಿತಿ ಗಂಭೀರವಿರುವ ಬಗ್ಗೆ ಪರಿಶೀಲನೆ ನಡೆಸಿ ಡಿ.31ರವರೆಗೆ ಬ್ರಿಟನ್ನಿಂದ ವಿಮಾನ ಸಂಚಾರವನ್ನು ನಿರ್ಬಂಸಿದೆ.