ಮಥುರಾ: ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಮಸೀದಿ ತೆರವುಗೊಳಿಸಿ, ಇಡೀ 13.37 ಎಕರೆ ಭೂಮಿಯ ಮಾಲೀಕತ್ವ ವಹಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಸಿವಿಲ್ ಅರ್ಜಿ ವಿಚಾರಣೆಯನ್ನು ಜನವರಿ 7ರಂದು ನಡೆಸುವುದಾಗಿ ಮಥುರಾ ಕೋರ್ಟ್ ತಿಳಿಸಿದೆ. ಗುರುವಾರ ಜಿಲ್ಲಾ ನ್ಯಾಯಾೀಶೆ ಸಾಧನಾ ರಾಣಿ ಅಲಭ್ಯವಾಗಿದ್ದ ಹಿನ್ನೆಲೆ, ವಿಚಾರಣೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಮಥುರಾ ಶ್ರೀಕೃಷ್ಣ ಜನಿಸಿದ ಪವಿತ್ರಸ್ಥಾನವಾಗಿದ್ದು, ಮೊಘಲ್ ಅರಸ ಔರಂಗಜೇಬ್ ಶ್ರೀಕೃಷ್ಣಜನ್ಮಭೂಮಿಯಲ್ಲಿದ್ದ ಕೃಷ್ಣ ದೇಗುಲವನ್ನು ಕೆಡವಿ ಈದ್ಗಾ ಮಸೀದಿ ನಿರ್ಮಿಸಿದ್ದ. ಹಾಗಾಗಿ ಇಡೀ ಭೂಮಿಯ ಮಾಲೀಕತ್ವ ವಹಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಕೆಯಾಗಿದೆ.