ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಹಾಗೂ ಓವೈಸಿಯ ಎಐಎಂಐಎಂ ಮೈತ್ರಿ ಆಡಳಿತ ನಿಜಾಮ್ ಹಾಗೂ ನವಾಬ್ ಆಳ್ವಿಕೆ ಸೃಷ್ಟಿಸಿದ್ದು, ಬಿಜೆಪಿ ಈ ಬಾರಿ ನಿಜಾಮ ಸಂಸ್ಕøತಿಯಿಂದ ಹೈದರಾಬಾದ್ ಜನತೆಯನ್ನು ಮುಕ್ತಗೊಳಿಸಿ, ರಾಜ್ಯದಲ್ಲಿ ನೈಜ ಪ್ರಜಾಪ್ರಭುತ್ವ ಸ್ಥಾಪಿಸಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾಪೆರ್ರೇಪೊಷನ್ (ಸಿಎಚ್ಎಂಸಿ) ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿರುವ ಶಾ, ಭಾಗ್ಯಲಕ್ಷ್ಮೀ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ಸಿಕಿಂದರಾಬಾದ್ನಿಂದ ಸಿತಾಫಲಮಂಡಿ ವರೆಗೆ ರೋಡ್ ಶೋ ನಡೆಸಿದರು.
ಈ ವೇಳೆ ಆಡಳಿತ ಪಕ್ಷ ಟಿಆರ್ಎಸ್ ಹಾಗೂ ಮಿತ್ರಪಕ್ಷ ಎಐಎಂಐಎಂ ಅನ್ನು( ಆಲ್ ಇಂಡಿಯಾ ಮಜಿಲಿಸ್-ಇ- ಇತ್ತೆಹದುಲ್-ಮುಸ್ಲಿಮಿನ್) ಅವರು, ತರಾಟೆ ತೆಗೆದುಕೊಂಡರು. ಆಡಳಿತ ಪಕ್ಷದ ಅಸಂಬದ್ಧ ಹಾಗೂ ಅನುಚಿತ ವರ್ತನೆಗಳಿಂದ ಹೈದರಾಬಾದ್ ಜನತೆ ಹೈರಾಣಾಗಿದ್ದಾರೆ. ನಗರದ ವ್ಯವಸ್ಥೆ ಬಗ್ಗೆ ಗಮನಹರಿಸದ ಸರ್ಕಾರ , ತನ್ನ ಬೊಕ್ಕಸ ತುಂಬಿಸಿಕೊಳ್ಳುವುದರಲ್ಲೇ ಕಾಲಹರಣ ಮಾಡುತ್ತಿದ್ದು, ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕೈ ಹಾಕಿದೆ. ಇವುಗಳ ಪರಿಣಾಮವನ್ನು ಜನತೆ ಪ್ರವಾಹದಂತಹ ಸಂದರ್ಭಗಳಲ್ಲಿ ಎದುರಿಸುತ್ತಿದ್ದಾರೆ ಎಂದು ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.
ಜತೆಗೆ ಬಿಜೆಪಿಗೆ ಅಕಾರ ನೀಡಿ, ನಂತರ ನಾವು ರಾಜ್ಯದ ಅಕ್ರಮಗಳಿಗೆ ಅಂತ್ಯ ಹಾಡಿ, ನೈಸರ್ಗಿಕ ವಿಕೋಪಗಳನ್ನು ಸಮರ್ಥವಾಗಿ ನಿಭಾಯಿಸಲಾಗದ ಸರ್ಕಾರದ ವ್ಯವಸ್ಥೆಯನ್ನು ಬದಲಿಸುತ್ತೇವೆ. ಒಳ ಚರಂಡಿ ವ್ಯವಸ್ಥೆಗಳನ್ನೂ ಸರಿಪಡಿಸುವ ಜತೆಗೆ ಕುಟುಂಬ ರಾಜಕಾರಣ ನಡೆಸುತ್ತಿರುವ ನಿಜಾಮ ಸಂಸ್ಕøತಿಯನ್ನು ಕಿತ್ತೊಗೆಯುತ್ತೇವೆ ಎಂದು ಶಾ ಹೇಳಿದ್ದಾರೆ.