ನಕ್ಸಲರ ದಾಳಿ: ಕೋಬ್ರಾ ಪಡೆ ಅಕಾರಿ ಹುತಾತ್ಮ

ರಾಯ್‍ಪುರ: ಛತ್ತೀಸಗಡದ ಸುಕ್ಮಾ ನಕ್ಸಲರು ಎಸಗಿದ ಐಇಡಿ ದಾಳಿಯಲ್ಲಿ ಸಿಆರ್‍ಪಿಎಫ್‍ನ ಅರಣ್ಯ ಕಾರ್ಯಾಚರಣೆ ಪಡೆ ಕೋಬ್ರಾದ ಅಕಾರಿಯೊಬ್ಬರು ಹುತಾತ್ಮರಾಗಿರೆ. 10 ಮಂದಿ ಕಮಾಂಡೊಗಳು ಗಭೀರವಾಗಿ ಗಾಯಗೊಂಡಿರೆ ಎಂದು ಅಕಾರಿಗಳು ಭಾನುವಾರ ಬೆಳಗ್ಗೆ ತಿಳಿಸಿರೆ
ಕೋಬ್ರಾ ಪಡೆ 206 ಬೆಟಾಲಿಯನ್ ಸಹಾಯಕ ಕಮಾಂಡೆಂಟ್ ನಿತಿನ್ ಭಲೇರಾವ್ ಅವರು ಸುಕ್ಮಾದ ತಾಡ್ಮೆಟ್ಲಾ ಪ್ರದೇಶದ ಬಳಿ ನಡೆದ ಸೋಟದಲ್ಲಿ ಗಾಯಗೊಂಡಿರೆ. ಇತರೆ 9 ಕಮಾಂಡೊಗಳು ಗಂಭೀರವಾಗಿ ಗಾಯಗೊಂಡಿದ್ದು , ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದು ಅಕಾರಿಗಳು ತಿಳಿಸಿ.
ಅರಣ್ಯ ಪ್ರದೇಶದಲ್ಲಿ ಕಳೆದ ರಾತ್ರಿ ಕೋಬ್ರಾದ ಯೋಧರ ತಂಡ ಹಾಗೂ ಇಬ್ಬರು ಹಿರಿಯ ಅಕಾರಿಗಳು ಕಾರ್ಯಾಚರಣೆ ನಡೆಸಲು ತೆರಳಿದ್ದರು. ಈ ವೇಳೆ ನಕ್ಸಲರು ಐಇಡಿ ಸೋಟಿಸಿದ್ದು, ಓರ್ವ ಅಕಾರಿ ಹುತಾತ್ಮರಾಗಿದ್ದಾರೆ. ಉಳಿದವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿ ಅಕಾರಿಗಳು ಮಾಹಿತಿ ನೀಡಿ.
ಗಾಯಾಗೊಂಡಿದ್ದ 10 ಮಂದಿ ಯೋಧರನ್ನು ಏರ್‍ಲಿಫ್ಟ್ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಎಂದು ವರದಿಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ