ಲೇಹ್: ಇಲ್ಲಿನ ಭಾರತೀಯ ವಾಯು ಪಡೆ (ಐಎಎಫ್) ಕೇಂದ್ರದಲ್ಲಿ ಅತಿದೊಡ್ಡ ಸೌರ್ಯ ಶಕ್ತಿ ಯೋಜನೆ ಅನುಷ್ಠಾನಗೊಳಿಸುವುದರೊಂದಿಗೆ ಕೇಂದ್ರಾಡಳಿತ ಪ್ರದೇಶ ಲಡಾಖ್ ಬೃಹತ್ ಸೌರ್ಯ ಶಕ್ತಿ ಘಟಕವನ್ನು ಹೊಂದಿದೆ.
ಪಳಿಯುಳಿಕೆ ಇಂಧನ ಮತ್ತು ಸಾಂಪ್ರದಾಯಿಕ ವಿಧಾನಗಳಿಗೆ ಬದಲಿಯಾಗಿ ಸುಸ್ಥಿರ ಶಕ್ತಿಯನ್ನು ಒದಗಿಸುವಲ್ಲಿ ಈ ಬೃಹತ್ ಯೋಜನೆಯನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಅನುಸಾರ ಯೋಜನೆ ಜಾರಿಗೊಂಡಿದೆ.
ಪ್ರಾವಿಜನ್ ಆಫ್ ಸೋಲಾರ್ಟೊ ಪೊವೋಲ್ಟಾಯಿಕ್ ಪವರ್ ಪ್ಲಾಂಟ್ 1.5 ಎಂಡಬ್ಲ್ಯೂ ಎಂಹ ಹೆಸರಿನ ಈ ಯೋಜನೆ 12 ತಿಂಗಳಲ್ಲಿ ಪೂರ್ಣಗೊಂಡಿದ್ದು, ನಿಗದಿಪಡಿಸಿದ ಅವ 2021ರ ಮಾರ್ಚ್ 31 ಆಗಿತ್ತು.
122 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಪಶ್ಚಿಮ ವಾಯು ವಿಭಾಗದ ಮುಖ್ಯ ಕಮಾಂಡರ್ ಏರ್ ಮಾರ್ಷಲ್ ವಿ.ಆರ್. ಚೌಧರಿ ಇತ್ತೀಚೆಗೆ ಉದ್ಘಾಟಿಸಿದರು.