ಹೊಸದಿಲ್ಲಿ: ಪ್ರತಿಯೊಬ್ಬರಿಗೂ ವಯಸ್ಸಾಗುವುದು ಸಹಜವಾದರೂ, ಚಿರ ಯುವಕ/ಯುವತಿಯಾಗಿರಬೇಕೆಂಬುದು ಎಲ್ಲರ ಬಯಕೆಯಾಗಿದ್ದು, ಇಸ್ರೇಲಿ ವಿಜ್ಞಾನಿಗಳ ಹೊಸ ಸಂಶೋಧನೆಯು ವಯಸ್ಸಾಗುವಿಕೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕೇವಲ ಆಮ್ಲಜನಕವನ್ನಷ್ಟೇ ಬಳಸಿ ವಯಸ್ಸನ್ನು ತಡೆಗಟ್ಟಲಾಗಿದೆ. ನೈಸರ್ಗಿಕ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವುದಷ್ಟೇ ಅಲ್ಲದೆ, ವಯಸ್ಸನ್ನು 25 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.
ವಯಸ್ಸಾಗುವಿಕೆಯನ್ನು ಹಿಂದೆ ಸರಿಸಲು ಸೆಲ್ಯುಲರ್ ಆಧಾರವು ಸಹಾಯಕವಾಗಬಹುದು ಎಂದು ಟೆಲ್ ಅವಿವಾ ವಿಶ್ವವಿದ್ಯಾಲಯದ ವಿಜ್ಞಾನಿ ಶೈ ಎಫ್ರತಿ ತಿಳಿಸಿದ್ದಾರೆ.
ಜೈವಿಕ ವಯಸ್ಸಾಗುವಿಕೆ ಪ್ರಕ್ರಿಯೆಯ ಟೆಲೊಮಿರ್ನ್ನು ಸಂಕ್ಷಿಪ್ತವಾಗಿ ಹೋಲಿ ಗ್ರೈಲ್ ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿರುವ ಎಫ್ರತಿ, ಅದರಂತೆ ಸೆಲ್ಯುಲರ್ ಹಂತದಲ್ಲಿ ವಯಸ್ಸಾಗುವಿಕೆಯನ್ನು ಹಿಂದಕ್ಕೆ ಸರಿಸಲು ಸಾಧ್ಯವಾಗಿಸುವ ಟೆಲೊಮಿರ್ ಎಲೊಗ್ನೇಷನ್ನ್ನು ಸಾಸುವಲ್ಲಿ ವಿಜ್ಞಾನಿಗಳು ಸಫಲರಾಗಿರುವುದಾಗಿ ಅವರು ಹೇಳಿದ್ದಾರೆ.
ಆಮ್ಲಜನ ಬಳಕೆ
ಟೆಲ್ ಅವಿವಾ ವಿಶ್ವವಿದ್ಯಾನಿಲಯ ಮತ್ತು ಶಮಿರ್ ವೈದ್ಯಕೀಯ ಕೇಂದ್ರದ ವಿಜ್ಞಾನಿಗಳು ವಯಸ್ಸಾಗುವುದನ್ನು ಮಾತ್ರ ತಡೆಗಟ್ಟಿಲ್ಲ. ಆದರೆ, ಆಮ್ಲಜನಕವನ್ನು ಉನ್ನತ ಒತ್ತಡ ಮಟ್ಟದಲ್ಲಿ ಬಳಸುವ ಮೂಲಕ ವಯಸ್ಸನ್ನು ಹಿಮ್ಮುಖವಾಗಿಸಿದ್ದಾರೆ. ಮುಖ್ಯವಾಗಿ ಈ ಸಂಶೋಧನೆಯಲ್ಲಿ ವಯಸ್ಸಾಗುವಿಕೆ ಮತ್ತು ಅನಾರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಲಾಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಯುವ ವಿಜ್ಞಾನಿಗಳಿಗೆ ಸೂರ್ತಿ
ಈ ಸಂಶೋಧನೆಯು ವಯಸ್ಸಾಗುವಿಕೆಯನ್ನು ಮಾರಣಾಂತಿಕ ನ್ಯೂನ್ಯತೆ ಎನ್ನುವ ಬದಲು ಇದನ್ನು ಒಂದು ಕಾಯಿಲೆ ಎಂದು ಪರಿಗಣಿಸಿ ಚಿಕಿತ್ಸೆ ನೀಡಲು ಯುವ ವಿಜ್ಞಾನಿಗಳಿಗೆ ಈ ಫಲಿತಾಂಶವು ಸೂರ್ತಿಯಾಗಬಹುದು ಎಂದು ಎಫ್ರಟಿ ತಿಳಿಸಿದ್ದಾರೆ.