ಸಂಸ್ಕøತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವಿಶ್ವದ 2ನೇ ರಾಜಕಾರಣಿ ಖ್ಯಾತಿ ನ್ಯೂಜಿಲ್ಯಾಂಡ್ ಸಂಸದನಾಗಿ ಭಾರತೀಯ ಆಯ್ಕೆ

ವೆಲ್ಲಿಂಗ್ಟನ್ : ರಾಷ್ಟ್ರರಾಜಕಾರಣದಲ್ಲಿ ಮಾತ್ರವಲ್ಲದೆ, ವಿದೇಶಗಳ ರಾಜಕೀಯ ಕ್ಷೇತ್ರದಲ್ಲೂ ಭಾರತೀಯರು ವಿಶಿಷ್ಟ ಛಾಪು ಮೂಡಿಸುತ್ತಿದ್ದು, ನ್ಯೂಜಿಲ್ಯಾಂಡ್ ಸಂಸತ್ತಿನ ಹ್ಯಾಮಿಲ್ಟನ್ ಕ್ಷೇತ್ರದ ಸಂಸದ ಡಾ. ಗೌರವ್ ಶರ್ಮಾ, ಸಂಸ್ಕøತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಸಂಸದ ಹಾಗೂ ವಿದೇಶಗಳಲ್ಲಿ ಸಂಸ್ಕøತದಲ್ಲಿ ಪ್ರಮಾಣವಚನ ಪಡೆದ ವಿಶ್ವದ ಎರಡನೇ ರಾಜಕಾರಣಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.
ಸುರಿನಾಮ್ ಅಧ್ಯಕ್ಷರಾಗಿರುವ ಭಾರತೀಯ ಮೂಲದ ಚಂದ್ರಿಕಾಪ್ರಸಾದ್ (ಚಾನ್ ಸಂತೋಕಿ) ಇದಕ್ಕೂ ಮೊದಲು , ವೇದಗಳ ಪಠಣದೊಂದಿಗೆ ಸಂಸ್ಕøತದಲ್ಲಿ ಪ್ರಮಾಣವಚನ ಸ್ವೀಕರಿಸಿ,ವಿದೇಶದಲ್ಲಿ ಸಂಸ್ಕøತದಲ್ಲಿ ಪ್ರಮಾಣವಚನ ಸ್ವೀಕರಿಸಿದ, ವಿಶ್ವದ ಮೊದಲ ರಾಜಕಾರಣಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.
ಈಗ ಗೌರವ್ ಶರ್ಮಾ ಕೂಡ ಇದೇ ರೀತಿ ವಿದೇಶಿ ನೆಲದಲ್ಲಿ ಭಾರತೀಯ ಸಂಸ್ಕøತಿಯ ಕಂಪು ಹರಡಿದ್ದು, ಮೊದಲು ಸ್ಥಳೀಯ ಭಾಷೆಯಾದ ಮಾವೋರಿಯಲ್ಲಿ ಪ್ರಮಾಣವಚನ ಸ್ವೀಕರಿಸಿ, ಬಳಿಕ ಸಂಸ್ಕøತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
33 ವರ್ಷದ ಶರ್ಮಾ,ಹಿಮಾಚಲ ಪ್ರದೇಶದ ಹಮೀರ್‍ಪುರ ಜಿಲ್ಲೆಯ ಹಡೆಟಾ ಗ್ರಾಮದವರಾಗಿದ್ದು, ಅಕ್ಟೋಬರ್ 17ರಂದು ಹ್ಯಾಮಿಲ್ಟನ್ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಚುನಾಯಿತರಾಗಿದ್ದಾರೆ. 2017ರಲ್ಲಿಯೂ ಲೇಬರ್ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ರ್ಪಸಿದ್ದ ಅವರು, ಈ ಬಾರಿ ಗೆಲವು ಸಾಸಿದ್ದು, ರಾಷ್ಟ್ರೀಯ ಪಕ್ಷದ ಟಿಮ್ ಮ್ಯಾಕಿಂಡೋ ಅವರನ್ನು 4,386 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ