ಧಾರವಾಡ: ಜಿಪಂ ಬಿಜೆಪಿ ಸದಸ್ಯ ಯೋಗೇಶ್ಗೌಡರ ಕೊಲೆ ಪ್ರಕರಣದಲ್ಲಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನ ಅವಯನ್ನು ಸಿಬಿಐ ವಿಶೇಷ ನ್ಯಾಯಾಲಯ 14 ದಿನ ವಿಸ್ತರಿಸಿ ಸೋಮವಾರ ಆದೇಶ ಹೊರಡಿಸಿದೆ.
ಕೊಲೆ ಪ್ರಕರಣಕ್ಕೆ ಸಂಬಂಸಿದಂತೆ ನ.6ರಂದು ಸಿಬಿಐ ವಿಚಾರಣೆ ಎದುರಿಸಿದ ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಿಬಿಐ ವಿಶೇಷ ನ್ಯಾಯಾಲಯ ಒಂದು ದಿನ ನ್ಯಾಯಾಂಗ ಬಂಧನದ ಆದೇಶ ನೀಡಿತ್ತು. ನಂತರ ಮೂರು ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿತ್ತು.
ಮುಗಿದ ವಿಚಾರಣೆ:
ನ.9ರಂದು ವಿನಯ ಕುಲಕರ್ಣಿ ವಿಚಾರಣೆ ಮುಗಿದಿದೆ. ನ್ಯಾಯಾಲಯದ ವಶಕ್ಕೆ ಪಡೆಯುವಂತೆ ಸಿಬಿಐ ಅಕಾರಿಗಳು ಮನವಿ ಮಾಡಿದ್ದರು. ಸಿಬಿಐ ಕೋರಿಕೆ ಮೇರೆಗೆ ನಿಯೋಜಿತ ನ್ಯಾಯಾೀಶೆ ಪಂಚಾಕ್ಷರಿ ಎಂ., ನ.23ರ ವರೆಗೆ(14 ದಿನ) ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು.
ಆರೋಗ್ಯದ ಬಗ್ಗೆ ಮಾಹಿತಿ ಪಡೆದ ನ್ಯಾಯಾೀಶರು:
14 ದಿನ ನ್ಯಾಯಾಂಗ ಬಂಧನ ಅವ ಮುಗಿದ ಹಿನ್ನೆಲೆಯಲ್ಲಿ ಸಿಬಿಐ ಸೋಮವಾರ ವಿಡಿಯೋ ಕಾನರೆನ್ಸ್ನಲ್ಲೇ ವಿಶೇಷ ನ್ಯಾಯಾಲಯದ ಮುಂದೆ ವಿನಯ ಕುಲಕರ್ಣಿಯನ್ನು ಹಾಜರುಪಡಿಸಿದ ವೇಳೆ ನ್ಯಾಯಾೀಶರು ಅವರ ಆರೋಗ್ಯದ ಮಾಹಿತಿ ಪಡೆದರು.
ನಿಯೋಜಿತ ನ್ಯಾಯಾೀಶರ ಮುಂದೆ ಸಿಬಿಐ ಪರ ವಕೀಲ ಸುದರ್ಶನ, ಪ್ರಕರಣದ ಬಗ್ಗೆ ರಾಕೇಶ ರಂಜನ್ ನೇತೃತ್ವದ ಸಿಬಿಐ ತಂಡ ಚುರುಕಿನ ತನಿಖೆ ನಡೆಸಿದೆ. ಆರೋಪಿ ಹೊರ ಬಂದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನ ವಿಸ್ತರಿಸಲು ಕೋರಿದರು.
ಸಿಬಿಐ ಕೋರಿಕೆ ಮೇರೆಗೆ ನಿಯೋಜಿತ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾೀಶೆ ಪಂಚಾಕ್ಷರಿ ಎಂ. ಅವರು ಪುನಃ 14 ದಿನ ಕಾಲ(ಡಿ.7ರ ವರೆಗೆ) ನ್ಯಾಯಾಂಗ ಬಂಧನ ಅವ ವಿಸ್ತರಿಸಿ ಆದೇಶ ಹೊರಡಿಸಿದರು. ಇದರಿಂದ ಮಾಜಿ ಸಚಿವ ವಿನಯ್ಗೆ ಹಿಂಡಲಗಾ ಜೈಲೇ ಗತಿಯಾಗಿದೆ.