ಕುಂದಾಪುರ: ಸಿಗಂದೂರು ದೇವಳದ ಆಡಳಿತದಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ. ಹಿಂದಿನ ಆಡಳಿತ ಮಂಡಳಿಯ ಸುಪರ್ದಿಯಲ್ಲಿ ದೇವಳದ ಕಾರ್ಯಗಳು ನಡೆಯುತ್ತವೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಮಂಗಳವಾರ ಮಿನಿ ವಿಧಾನಸೌಧಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸಿಗಂದೂರು ದೇವಳದ ಪೂಜೆ ಹಾಗೂ ಪದ್ದತಿಗಳಿಗೆ ಯಾವುದೇ ಚ್ಯುತಿ ಬರದಂತೆ ಹಿಂದಿನ ಆಡಳಿತ ವ್ಯವಸ್ಥೆಯೇ ಕಾರ್ಯ ನಿರ್ವಹಿಸುತ್ತದೆ. ಸ್ಥಳೀಯ ಶಾಸಕ ಹಾಲಪ್ಪ ಮತ್ತು ಮಠಾೀಶರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಹಿಂದಿನ ಆಡಳಿತ ಮಂಡಳಿಯ ಸುಪರ್ದಿಗೆ ದೇವಳವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ಸೋತಲ್ಲೆಲ್ಲಾ ಮತ ಯಂತ್ರ ಹಾಳಾಗಿದೆ ಎನ್ನುವ ಅವರು ಗೆದ್ದ ಕಡೆ ಮತಯಂತ್ರ ಏನಾಗಿರುತ್ತೆ.. ಯಾವುದೇ ರಾಜಕೀಯ ಪಕ್ಷವಿರಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಸಿದ್ಧರಾಮಯ್ಯ ಗೆದ್ದಾಗ ಮತಯಂತ್ರ ಸರಿ ಇತ್ತು. ಸೋತಾಗ ಹಾಳಾಗಿದೆ ಎನ್ನುತ್ತಾರೆ. ಇಂತಹ ಮಾತುಗಳು ಅವರಂತ ವ್ಯಕ್ತಿಗಳಿಗೆ ಭೂಷಣವಲ್ಲ. ಮತಯಂತ್ರ ಕೆಟ್ಟಿಲ್ಲ. ಮನಸ್ಸು ಕೆಟ್ಟಿದೆ ಎಂದು ವ್ಯಂಗ್ಯ ವಾಡಿದರು.
ಎಲ್ಲಾ ಆರೋಗ್ಯ ಇಲಾಖೆಗಳಲ್ಲಿ ಕೋವಿಡ್ ಟೆಸ್ಟ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಅಗತ್ಯವಿರುವ ಕಡೆ ಆಸ್ಪತ್ರೆಯಲ್ಲಿ ಕ್ಯಾಂಪ್ ಮಾಡುವ ವ್ಯವಸ್ಥೆ ಮಾಡಲಾಗುವುದು. ಆರಂಭದಲ್ಲಿ ಸಣ್ಣ ಪುಟ್ಟ ದೂರುಗಳು ಬರುವುದು ಸಾಮಾನ್ಯ. ಅದನ್ನು ಸರಿ ಪಡಿಸುತ್ತೇವೆ ಎಂದರು.
ಕೊರೊನಾ ಹಾವಳಿಯಿಂದ ಸಪ್ತಪದಿ ಕಾರ್ಯಕ್ರಮ ಸ್ಥಗಿತಗೊಂಡಿದೆ. ಕೋವಿಡ್ 19 ನಿಯಮಗಳನ್ನು ಅಳವಡಿಸಿಕೊಂಡು ಮುಹೂರ್ತ ನಿಗದಿ ಪಡಿಸುತ್ತೇವೆ. ಕೋಟೇಶ್ವರದ ಕೊಡಿ ಜಾತ್ರೆ, ಉಪ್ಪುಂದದ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಎಲ್ಲೆಲ್ಲಿ ಸಾಂಪ್ರದಾಯಿಕವಾದ ಪೂಜೆ , ಪುನಸ್ಕಾರಗಳು ನಡೆಯಬೇಕೋ ಅಲ್ಲೆಲ್ಲಾ ಕೋವಿಡ್ 19 ನಿಯಮಾನುಸಾರ ಉತ್ಸವ ನಡೆಸುವ ಬಗ್ಗೆ ಸೂಚನೆ ನೀಡಲಾಗಿದೆ.
ಕೊಲ್ಲೂರು ದೇವಳಕ್ಕೆ 9 ಜನ ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದು ಸದ್ಯದಲ್ಲೆ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದರು.
ಸಚಿವ ಸಂಪುಟ ವಿಸ್ತರಣೆಯ ಪರಮಾಕಾರ ಇರುವುದು ಸಿಎಂ ಯಡಿಯೂರಪ್ಪನವರಿಗೆ. ರಾಜ್ಯಾಧ್ಯಕ್ಷ, ರಾಷ್ಟ್ರಾಧ್ಯಕ್ಷ ಮತ್ತು ಕೇಂದ್ರದ ತಂಡ ಸೇರಿಕೊಂಡು ನಿರ್ಣಯ ತೆಗೆದುಕೊಳ್ಳುತ್ತಾರೆ. ಪಕ್ಷದ ತೀರ್ಮಾನಕ್ಕೆ ಬದ್ದ ಎಂದರು.