ನಾಳೆಯಿಂದ ಕಲಬುರಗಿ, ದೆಹಲಿ ನಡುವೆ ವಿಮಾನ ಹಾರಾಟ ಪ್ರಾರಂಭ

ಕಲಬುರಗಿ: ಕಲಬುರಗಿ ಏರ್‍ಪೋರ್ಟ್‍ನಲ್ಲಿ ಹಂತ ಹಂತವಾಗಿ ಎಲ್ಲ ಮಹಾನಗರಗಳಿಗೆ ವಿಮಾನ ಸೌಲಭ್ಯ ವಿಸ್ತರಿಸುತ್ತಿರುವ ಹಿನ್ನಲೆಯಲ್ಲಿ, ನಾಳೆಯಿಂದ ಕಲಬುರಗಿ ಮತ್ತು ದೆಹಲಿಯ ಮಧ್ಯೆ ಸ್ಟಾರ್ ಸಂಸ್ಥೆ ನಾನ್‍ಸ್ಟಾಪ್ ವಿಮಾನ ಹಾರಾಟಕ್ಕೆ ಚಾಲನೆ ನೀಡಲಿದೆ.
ಈ ಬಗ್ಗೆ ಈಗಾಗಲೇ ಸ್ಟಾರ್ ಏರ್ ಸಂಸ್ಥೆ ಪ್ರಕಟಣೆಯನ್ನ ಸಹ ಹೊರಡಿಸಿದೆ. 1800 ಕಿಮೀ ದೂರದ ದೆಹಲಿಗೆ ತಲುಪಲು ಎರಡು ದಿನಗಳು ಬೇಕಾಗುತ್ತಿತ್ತು. ಇದೀಗ ಕೇವಲ ಎರಡು ಗಂಟೆಗಳಲ್ಲಿ ದೆಹಲಿಗೆ ತಲುಪಬಹುದಾಗಿದೆ. ಇನ್ನೂ ವಾರದಲ್ಲಿ ಮಂಗಳವಾರ, ಬುಧವಾರ ಮತ್ತು ಶನಿವಾರ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಇನ್ನೂ ಕಲಬುರಗಿ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.20 ಕ್ಕೆ ಹೊರಟು, ಮಧ್ಯಾನ 12.40 ಕ್ಕೆ ದೆಹಲಿ ತಲುಪಲಿದೆ, ದೆಹಲಿಯಿಂದ ಮಧ್ಯಾನ 1.10 ನಿಮಿಷಕ್ಕೆ ಟೆಕಾಫ್ ಆಗಿ ಮಧ್ಯಾನ 3.30 ಕ್ಕೆ ಕಲಬುರಗಿ ಏರ್‍ಪೋಟ್9ನಲ್ಲಿ ಲ್ಯಾಂಡ್ ಆಗಲಿದೆ ಎಂದು ಸ್ಟಾರ್ ಎರ್ ಲೈನ್ ಸಂಸ್ಥೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ