ಬೆಂಗಳೂರು: ರಾಜ್ಯದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಸಂಪೂರ್ಣ ಪಟಾಕಿ ನಿಷೇಧಕ್ಕೆ ಕೋರಿ ವಿಷ್ಣು ಭರತ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಅರ್ಜಿದಾರರು ತಡವಾಗಿ ಕೋರ್ಟ್‍ಗೆ ಪಿಐಎಲ್ ಸಲ್ಲಿಸಿದ್ದಾರೆ. ಇಲ್ಲವಾದರೆ ಪಟಾಕಿ ನಿಷೇಸುವ ಕಠಿಣ ಆದೇಶ ನೀಡಬಹುದಿತ್ತು. ಹಾಗಾಗಿ ಹಸಿರು ಪಟಾಕಿ ಮಾರಾಟಕ್ಕೆ ಷರತ್ತುಬದ್ಧ ಅನುಮತಿ ನೀಡುತ್ತಿದ್ದೇವೆ. ಪೊಲೀಸರು ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹಸಿರು ಚಿಹ್ನೆ ಸಂಸ್ಥೆ ದೃಢೀಕರಣ ಇರಬೇಕು. ಹಸಿರು ಪಟಾಕಿ ಮಾತ್ರ ಮಾರಾಟ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸರ್ಕಾರ, ಪೊಲೀಸರು ಸ್ಥಳೀಯ ಆಡಳಿತಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನಿಯಮಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಬೇರೆ ಪಟಾಕಿಗಳು ಬಳಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಕ್ರಮ ವಹಿಸಬೇಕು. ಶಬ್ದ ಮಾಲಿನ್ಯ ಆಗದಂತೆಯೂ ಕೂಡ ಎಚ್ಚರ ವಹಿಸಬೇಕು. ಮೊದಲೇ ಈ ಅರ್ಜಿ ಸಲ್ಲಿಕೆಯಾಗಿದ್ದರೆ, ಸಂಪೂರ್ಣ ಪಟಾಕಿ ನಿಷೇಸುವ ಕಠಿಣ ಆದೇಶವನ್ನೇ ನೀಡುತ್ತಿ ಎಂದು ಮೌಖಿಕವಾಗಿ ಹೇಳಿದರು.
ಇನು ಆದೇಶ ಜಾರಿಗೊಳಿಸಿದ ಬಗ್ಗೆ ಸರ್ಕಾರ, ಬಿಬಿಎಂಪಿ ಕೋರ್ಟ್‍ಗೆ ವರದಿ ಸಲ್ಲಿಸಬೇಕೆಂದು ಪೀಠ ಸೂಚನೆ ನೀಡಿದೆ. ಹಸಿರು ಪಟಾಕಿಯ ಅರ್ಥವನ್ನೇ ರಾಜ್ಯಸರ್ಕಾರ ಸರಿಯಾಗಿ ವಿವರಿಸಿಲ್ಲ. ಹಸಿರು ಪಟಾಕಿ ಬಗ್ಗೆ ವ್ಯಾಖ್ಯಾನಿಸಲು ರಾಜ್ಯ ಸರ್ಕಾರ ಆಸಕ್ತಿ ತೋರಿಲ್ಲ.
ಅನುಷ್ಠಾನಕ್ಕೆ ತರಬೇಕಾದ ಅಕಾರಿಗಳಿಗೇ ಹಸಿರು ಪಟಾಕಿ ಎಂದರೆ ಯಾವುದು ಎಂಬುದೇ ಗೊತ್ತಿಲ್ಲ ಎಂದು ವಿಭಾಗೀಯ ಪೀಠ ಬೇಸರ ವ್ಯಕ್ತಪಡಿಸಿದೆ. ಕೊನೆಗೆ ಷರತ್ತುಬದ್ಧ ಅನುಮತಿ ನೀಡಿರುವ ನ್ಯಾಯಾಲಯ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಪಟಾಕಿ ಮಳಿಗೆಗಳ ಮೇಲೆ ಕಣ್ಗಾವಲಿಡಲು ಸೂಚಿಸಿದೆ.