ಐಟಿ ದಾಳಿ : 500 ಕೋಟಿ ರೂ. ದಾಖಲೆಯಿಲ್ಲದ ಆದಾಯ ಪತ್ತೆ

ಚೆನ್ನೆ : ತಮಿಳುನಾಡಿನ ಹೆಸರಾಂತ ಚಿನ್ನ ವ್ಯಾಪಾರ ಸಂಸ್ಥೆಯೊಂದರ ಮೇಲೆ ಆದಾಯ ಇಲಾಖೆ (ಐಟಿ)ದಾಳಿ ನಡೆಸಿದ್ದು, ಸುಮಾರು 500 ಕೋಟಿ ರೂ. ದಾಖಲೆಯಿಲ್ಲದ ಆದಾಯ ಪತ್ತೆಹಚ್ಚಿರುವುದಾಗಿ ಐಟಿ ಅಕಾರಿಗಳು ಮಾಹಿತಿ ನೀಡಿದ್ದಾರೆ.
ಇದುವರೆಗೂ 500 ಕೋಟಿ ರೂ.ಗೂ ಅಕ ದಾಖಲೆಯಿಲ್ಲದ ಆದಾಯವನ್ನು ಸಂಸ್ಥೆ ಹೊಂದಿರುವುದಾಗಿ ಪತ್ತೆಯಾಗಿದೆ. ಅಲ್ಲದೇ ಸಂಸ್ಥೆಯೇ 150 ಕೋಟಿ ರೂ. ದಾಖಲೆಯಿಲ್ಲದ ಆದಾಯ ಹೊಂದಿರುವುದಾಗಿ ಬಹಿರಂಗ ಪಡಿಸಿದೆ. ಶೋಧ ಕಾರ್ಯ ಮುಂದುವರಿಯಲಿದೆ ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ. ಮಂಗಳವಾರ ಮುಂಬೈ,ಚೆನ್ನೈ, ಕೋಲ್ಕತ್ತ, ಕಲ್ಲಿಕೋಟೆ, ಸಲೇಂ, ತ್ರಿಚಿ, ಮಧುರೈ, ತಿರುನೇಲ್ವೆಲಿ ಸೇರಿ 32 ಕಡೆ ಇಡಿ ಸಾಳಿ ನಡೆಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ