ಅಯೋಧ್ಯೆಗೆ ಬೃಹತ್ ಶ್ರೀರಾಮ ಘಂಟೆ ಕೇಳಿಸುತ್ತದೆ 8ಕಿ.ಮೀ.ದೂರಕ್ಕೆ ನಿನಾದ !

ಚೆನ್ನೈ:`ಜೈ ಶ್ರೀ ರಾಮ್’ ಎಂಬ ಹೆಸರಿನ 4.1 ಅಡಿ ಎತ್ತರದ ಬೃಹತ್ ಘಂಟೆಯೊಂದನ್ನು ಅಯೋಧ್ಯೆಯ ಪ್ರಸ್ತಾವಿತ ಶ್ರೀ ರಾಮ ಮಂದಿರಕ್ಕೆ ಅರ್ಪಿಸಲಾಗಿದೆ.
ಚೆನ್ನೈ ಮೂಲದ ಕಾನೂನು ಹಕ್ಕುಗಳ ಮಂಡಳಿಯು ಆಯೋಜಿಸಿದ್ದ ರಾಮ್ ರಥಯಾತ್ರೆ ಮೂಲಕ ಈ ಘಂಟೆಯನ್ನು ಅ.7ಕ್ಕೆ ಅಯೋಧ್ಯೆಗೆ ಒಯ್ದು ಸಮರ್ಪಿಸಲಾಯಿತು. ಸೆ.17ರಂದು ರಾಮೇಶ್ವರಂನಿಂದ ಪ್ರಾರಂಭವಾದ ಈ ಯಾತ್ರೆಯು ಅ.7ಕ್ಕೆ ಅಯೋಧ್ಯೆಯನ್ನು ತಲುಪಿತು.
ಈ ಘಂಟೆಯು ಅತ್ಯಂತ ವಿಶಿಷ್ಟವಾಗಿದ್ದು, ಇದು 613 ಕಿ.ಗ್ರಾಂ. ಭಾರ , 4.1 ಅಡಿ ಎತ್ತರ ಮತ್ತು 3.9 ಅಡಿ ಅಗಲವಿದೆ. ಈ ಘಂಟೆ ಬಾರಿಸಿದರೆ ಅದರ ಶಬ್ದವನ್ನು 8 ಕಿ.ಮೀ ದೂರದವರೆಗೂ ಕೇಳಬಹುದು. ಈ ಘಂಟೆಯನ್ನು ನೀಡಲು ನಾವು 11 ರಾಜ್ಯಗಳನ್ನು ದಾಟಿ ಅಯೋಧ್ಯೆಯನ್ನು ತಲುಪಲು 4,555 ಕಿ.ಮೀ .ದೂರವನ್ನು ಕ್ರಮಿಸಿರುವುದಾಗಿ ಕಾನೂನು ಹಕ್ಕುಗಳ ಮಂಡಳಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜಲಕ್ಷ್ಮಿ ಮಂಡ ಅವರು ಮಾಹಿತಿ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ