ವಿನಯ್ ಕುಲಕರ್ಣಿ ಬಂಧನದಲ್ಲಿ ರಾಜಕೀಯವಿಲ್ಲ: ಬಸವರಾಜ ಬೊಮ್ಮಾಯಿ

ಮಡಿಕೇರಿ: ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನಕ್ಕೆ ಸಂಬಂಸಿದಂತೆ ಸಿಬಿಐ ಕಾನೂನಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಬಂಧನದಲ್ಲಿ ಯಾವುದೇ ರಾಜಕೀಯ ಅಂಶಗಳು ಕಾಣುತ್ತಿಲ್ಲವೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಕಾರದ ಅವಯಲ್ಲೇ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಯೋಗೀಶ್ ಗೌಡ ಅವರ ಹತ್ಯೆ ನಡೆದಿತ್ತು ಮತ್ತು ಆ ಹಂತದಿಂದಲೆ ಅವರ ಹತ್ಯಾ ಪ್ರಕರಣಕ್ಕೆ ಸಂಬಂಸಿದಂತೆ ಪ್ರಶ್ನೆಗಳು ಕೇಳಿ ಬರಲಾರಂಭಿಸಿತ್ತು. ಇದೀಗ ಸಿಬಿಐ ತನ್ನ ಕಾರ್ಯ ನಡೆಸುತ್ತಿದ್ದು, ಇದರಲ್ಲಿ ರಾಜ್ಯ ಸರಕಾರದ ಯಾವುದೇ ಪಾತ್ರವಿಲ್ಲ. ಆದರೆ ಕಾಂಗ್ರೆಸ್‍ನ ಮುಖಂಡರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಲು ಉತ್ಸುಕರಾಗಿರುವುದರಿಂದ ಹತಾಶರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಈ ಪ್ರಕರಣದಲ್ಲಿ ಬಿಜೆಪಿಯ ಹಸ್ತಕ್ಷೇಪವಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಯಡಿಯೂರಪ್ಪ ಅವರೇ ಸಿಎಂ- ರಾಜ್ಯದ ಮುಖ್ಯ ಮಂತ್ರಿ ಸ್ಥಾನದ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಮುಂದಿನ ಮೂರು ವರ್ಷಗಳ ಕಾಲ ಬಿ.ಎಸ್. ಯಡಿಯೂರಪ್ಪ ಅವರೆ ಮುಖ್ಯ ಮಂತ್ರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಬಸವರಾಜ ಬೊಮ್ಮಾಯಿ ಅವರು ವಿಶ್ವಾಸದಿಂದ ನುಡಿದರು.
ಮತಾಂತರ ತಡೆಗೆ ಕಾನೂನು: ರಾಜ್ಯದಲ್ಲಿ ಲವ್ ಜಿಹಾದ್ ಬಗ್ಗೆ ಕಳೆದ ಒಂದು ದಶಕದಿಂದ ಚರ್ಚೆಯಾಗುತ್ತಿದ್ದು, ಹಲವು ಯುವಕರ ದಾರಿ ತಪ್ಪಿಸಲಾಗುತ್ತಿದೆ. ಇದು ಕೋಮು ಸಂಘರ್ಷಕ್ಕೂ ಕಾರಣವಾಗುತ್ತಿದೆ. ಮತಾಂತರದ ಪಿಡುಗಿಗೆ ಕರ್ನಾಟಕದ ಅಮಾಯಕ ಜನತೆ ಬಲಿಯಾಗಬಾರದು ಮತ್ತು ಇಂತಹ ಘಟನೆಗಳಿಂದ ಸಮಾಜದ ಶಾಂತಿ ಕದಡಿ ಕ್ಷೋಭೆ ಉಂಟಾಗಬಾರದೆನ್ನುವ ಕಾರಣಗಳಿಂದ ರಾಜ್ಯದಲ್ಲಿ ಈ ಸಂಬಂಧ ನೂತನ ಕಾನೂನು ತರಲು ಗಂಭೀರ ಚಿಂತನೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಂವಿಧಾನದ ಚೌಕಟ್ಟಿಗೆ ಒಳಪಟ್ಟು ಕಾನೂನು ರೂಪಿಸುವ ಸಂಬಂಧ ಕಾನೂನು ತಜ್ಞರ ಸಲಹೆಯೊಂದಿಗೆ ಮುಖ್ಯ ಮಂತ್ರಿಗಳು ಮತ್ತು ಅಕಾರಿಗಳೊಂದಿಗೆ ಚರ್ಚಿಸಿ ಇದಕ್ಕೆ ಅಂತಿಮ ರೂಪು ನೀಡಲಾಗುತ್ತದೆಂದರು.
ಶೀಘ್ರ ಬಂಧನ: ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಾಜಿ ಮೇಯರ್ ಸಂಪತ್‍ರಾಜ್ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಅವರನ್ನು ಶೀಘ್ರ ಬಂಸುವ ವಿಶ್ವಾಸವಿದೆ ಎಂದು ಗೃಹಸಚಿವರು ನುಡಿದರು.
ಗೋಷ್ಠಿಯ ಸಂದರ್ಭ ಮೈಸೂರು ವಿಭಾಗದ ಐಜಿಪಿ ವಿಪುಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕ್ಷಮಾ ಮಿಶ್ರಾ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ