ಕಠ್ಮಂಡು: ಭಾರತ- ನೇಪಾಳ ದೀರ್ಘಾವ ಹಾಗೂ ವಿಶೇಷ ಸಂಬಂಧ ಹೊಂದಿದ್ದು, ಗಡಿ ವಿಚಾರ ಕುರಿತಂತೆ ಎರಡು ರಾಷ್ಟ್ರಗಳ ನಡುವಿರುವ ಬಿಕ್ಕಟ್ಟನ್ನು ಮಾತುಕತೆ ಮೂಲಕವೇ ಬಗೆಹರಿಸಲು ನೇಪಾಳ ಸಿದ್ಧವಿದೆ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ತಿಳಿಸಿದ್ದಾರೆ.
ಈ ಹಿಂದೆ ಭಾರತಕ್ಕೆ ಸೇರಬೇಕಿರುವ ಪ್ರದೇಶಗಳನ್ನು ತನ್ನ ನಕ್ಷೆಯಲ್ಲಿ ತೋರಿಸಿ ಗಡಿ ವಿಚಾರವಾಗಿ ನೇಪಾಳ ಕ್ಯಾತೆ ತೆಗೆದಿತ್ತು. ಸದ್ಯ 3 ದಿನದ ಭೇಟಿಯ ಪ್ರಯುಕ್ತ ನೇಪಾಳದಲ್ಲಿರುವ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಅವರೊಂದಿಗೆ ಸಭೆ ನಡೆಸಿದ ಬಳಿಕ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಬಗ್ಗೆ ಒಲಿ ಮಾತನಾಡಿದ್ದಾರೆ.
ಎರಡು ರಾಷ್ಟ್ರಗಳ ಸೇನಾ ಮುಖ್ಯಸ್ಥರಿಗೆ ಪರಸ್ಪರ ಗೌರವಾನ್ವಿತ ಮಹಾರಥಿ ಸ್ಥಾನಮಾನ ನೀಡುವ ಸಂಪ್ರದಾಯವಿದೆ. ಅಂತೆಯೇ ನರವಾನೆಗೆ ನೇಪಾಳ ಸೇನೆಯ ಜನರಲ್ ರ್ಯಾಂಕ್ ನೀಡಿ ಗೌರವಿಸಲಾಗಿದ್ದು, ವಾಣಿಜ್ಯ, ಮೂಲಸೌಕರ್ಯ, ರಕ್ಷಣೆ ಕ್ಷೇತ್ರಗಳಲ್ಲಿ ಎರಡು ರಾಷ್ಟ್ರಗಳ ಬಾಂಧವ್ಯ ವೃದ್ಧಿಗೊಳಿಸುವ, ಸಮಸ್ಯೆ ಬಗೆಹರಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
==: ಭಾರತ- ನೇಪಾಳ ದೀರ್ಘಾವ ಹಾಗೂ ವಿಶೇಷ ಸಂಬಂಧ ಹೊಂದಿದ್ದು, ಗಡಿ ವಿಚಾರ ಕುರಿತಂತೆ ಎರಡು ರಾಷ್ಟ್ರಗಳ ನಡುವಿರುವ ಬಿಕ್ಕಟ್ಟನ್ನು ಮಾತುಕತೆ ಮೂಲಕವೇ ಬಗೆಹರಿಸಲು ನೇಪಾಳ ಸಿದ್ಧವಿದೆ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ತಿಳಿಸಿದ್ದಾರೆ.

==