
ಬೆಂಗಳೂರು: ರಾಜ್ಯದ ಮೂವರು ಐಪಿಎಸ್ ಅಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತರಬೇತಿ ವಿಭಾಗದ ಡಿಜಿಪಿಯನ್ನಾಗಿ ಪದಮ್ ಕುಮಾರ್ ಗರ್ಗ, ಅಪರಾಧ ತನಿಖಾದಳ ಮತ್ತು ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿ ಪಿ.ಎಸ್ ಸಂಧು, ಗೃಹ ರಕ್ಷಕ ದಳದ ಕಮಾಂಡೆಂಟ್ ಮತ್ತು ನಾಗರಿಕ ರಕ್ಷಣಾ, ಅಗ್ನಿಶಾಮಕ ದಳದ ನಿರ್ದೇಶಕರನ್ನಾಗಿ ಅಮರ್ ಕುಮಾರ್ ಪಾಂಡೆ ಅವರನ್ನು ವರ್ಗಾವಣೆ ಮಾಡಲಾಗಿದೆ.