ಗಾಂನಗರ: ಗುಜರಾತ್ನ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಕೇಶುಭಾಯಿ ಪಟೇಲ್ ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.
1995ರಲ್ಲಿ ಗುಜರಾತ್ನಲ್ಲಿ ಮೊದಲ ಬಾರಿಗೆ ಬಿಜೆಪಿ ಅಕಾರಕ್ಕೆ ಬಂದಾಗ, ಕೇಶುಭಾಯಿ ಮುಖ್ಯಮಂತ್ರಿಯಾದರು. ಇದಾದ ನಂತರ 1998ರಲ್ಲೂ ತಾವೇ ಎರಡನೇ ಅವಗೆ ಮುಖ್ಯಮಂತ್ರಿಯಾಗಿ ಚುನಾಯಿತಗೊಂಡಿದ್ದು, ಇವರ ಬಳಿಕ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾದರು. ಕೇಶುಭಾಯಿ ಅಗಲಿಕೆಗೆ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಸೇರಿ ಬಿಜೆಪಿ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.
ಕೇಶುಭಾಯಿ ಅವರ ಅಗಲಿಕೆ ತೀವ್ರ ದುಃಖ ಉಂಟುಮಾಡಿದೆ. ಅವರೊಬ್ಬ ಅತ್ಯದ್ಭುತ ನಾಯಕರಾಗಿದ್ದು, ಸಮಾಜದ ಪ್ರತಿಯೊಂದು ವರ್ಗದ ಬಗ್ಗೆ ಕಾಳಜಿ ಹೊಂದಿದ್ದರು. ಗುಜರಾತ್ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.