ಧಾರವಾಡ: ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಹಾನಿಗೊಳಗಾದ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಮನೆಯೊಂದಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಯಡಿ ಪರಿಹಾರಕ್ಕೆ ಶಿಫಾರಸ್ಸಿಗೆ ರೂ.20 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ದುಮ್ಮವಾಡದ ಕಂದಾಯ ನಿರೀಕ್ಷಕ ರಾಘವೇಂದ್ರ ಬೊಮ್ಮನಾಳ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಮಿಶ್ರಿಕೋಟಿ ಗ್ರಾಮದ ಅಶೋಕ ಗಂಗಪ್ಪ ಕಾಶಿಬಡಿಗೇರ ಎಂಬುವರ ಮನೆಯು ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಹಾನಿಗೀಡಾಗಿತ್ತು. ಸರ್ಕಾರ ನೀಡುವ ಪ್ರಕೃತಿ ವಿಕೋಪ ಪರಿಹಾರ ನಿಯಡಿ ಅರ್ಜಿ ಸಲ್ಲಿಸಿದ್ದರು. ಪರಿಹಾರಕ್ಕೆ ಶಿಫಾರಸು ಮಾಡಲು ದುಮ್ಮವಾಡದ ಕಂದಾಯ ನಿರೀಕ್ಷಕ ರಾಘವೇಂದ್ರ ಬೊಮ್ಮನಾಳ ರೂ.30 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.
ಕೊನೆಗೆ ರೂ. 20 ಸಾವಿರ ಲಂಚಕ್ಕೆ ಒಪ್ಪಿದ್ದರೆಂದು ಅ.16ರಂದು ಧಾರವಾಡ ಎಸಿಬಿ ಪೊಲೀಸ್ ಠಾಣೆಗೆ ಬಂದ ದೂರಿನ ಮೇರೆಗೆ ಎಸಿಬಿ ಪೊಲೀಸ್ ಅಕಾರಿಗಳು ದಾಳಿ ನಡೆಸಿ, ಆರೋಪಿ ರಾಘವೇಂದ್ರ ಬೊಮ್ಮನಾಳ ಲಂಚದ ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಬೆಳಗಾವಿಯ ಎಸಿಬಿ ಉತ್ತರ ವಲಯ ಪೊಲೀಸ್ ಅೀಕ್ಷಕ ಬಿ.ಎಸ್.ನೇಮಗೌಡ, ಎಸಿಬಿ ಪೊಲೀಸ ಉಪಾೀಕ್ಷಕ ಎಲ್.ವೇಣುಗೋಪಾಲ, ಪೊಲೀಸ್ ಇನ್ಸಪೆಕ್ಟರ್ ಬಿ.ಎ.ಜಾಧವ, ಮಂಜುನಾಥ ಹಿರೇಮಠ, ಸಿಬ್ಬಂದಿ ಗಿರೀಶ್ ಮನಸೂರ, ಲೊಕೇಶ ಬೆಂಡಿಕಾಯಿ, ಜೆ.ಜಿ.ಕಟ್ಟಿ, ಶಿವಾನಂದ ಕೆಲವಡಿ, ಕಾರ್ತಿಕ ಹುಯಿಲಗೋಳ, ಗಣೇಶ ಶಿರಹಟ್ಟಿ, ವಿರೇಶ, ರವೀಂದ್ರ ಯರಗಟ್ಟಿ, ಶಂಕರ ನರಗುಂದ ಇದ್ದರು.