ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ ಆಫ್ರಿಕಾದಿಂದ ಕರೆತರಲಾಗಿರುವ ಮೂರು ಚೀತಾಗಳನ್ನು ಈಗ ಪ್ರವಾಸಿಗರು ವೀಕ್ಷಣೆ ಮಾಡಬಹುದಾಗಿದೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹಸಿರು ನಿಶಾನೆ ತೋರುವ ಮೂಲಕ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿದ ಬಳಿಕ ಮಾತನಾಡಿ, ಇಲ್ಲಿನ ಮೃಗಾಲಯಕ್ಕೆ ಮೂರು ಹೊಸ ಚೀತಾಗಳನ್ನು ಕರೆತರಲಾಗಿದೆ. ಆಗಸ್ಟ್ 17ರಂದು ಪ್ರಾಣಿ ವಿನಿಮಯ ಯೋಜನೆಯಲ್ಲಿ ದಕ್ಷಿಣ ಆಫ್ರಿಕಾದಿಂದ ಒಂದು ಗಂಡು, ಎರಡು ಹೆಣ್ಣು ಚೀತಾಗಳು ಮೃಗಾಲಯಕ್ಕೆ ಬಂದಿವೆ. ದೇಶದಲ್ಲಿ ಹೈದರಾಬಾದ್ ಬಿಟ್ಟರೆ, ಮೈಸೂರಿನಲ್ಲಿ ಮಾತ್ರ ಈ ಚೀತಾಗಳಿವೆ ಎಂದರು.
ದಸರಾ ಹಿನ್ನೆಲೆಯಲ್ಲಿ ನಿರ್ಬಂಧ :
ಮೃಗಾಲಯ, ಚಾಮುಂಡಿಬೆಟ್ಟ ಹಾಗೂ ದಸರಾ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಬರುವ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗುತ್ತದೆ. ಕೇಂದ್ರ ಸರ್ಕಾರ ಹಾಗೂ ತಜ್ಞರ ತಂಡ ನೀಡಿರುವ ನಿಬಂಧನೆಯನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತೇವೆ. ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಕಾರಣ. ಸಾರ್ವಜನಿಕ ನಿರ್ಬಂಧವನ್ನು ಅನಿವಾರ್ಯವಾಗಿ ಪಾಲನೆ ಮಾಡಲೇಬೇಕಾಗಿದೆ ಎಂದು ತಿಳಿಸಿದರು.