ಹೊಸದಿಲ್ಲಿ: ದೇಶದಲ್ಲಿ 24 ಅನಕೃತ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಬುಧವಾರ ಘೋಷಿಸಿದ ವಿಶ್ವವಿದ್ಯಾನಿಲಯ ಅನುದಾನ ಆಯೋಗವು(ಯುಜಿಸಿ), ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚು ನಕಲಿ ವಿಶ್ವವಿದ್ಯಾನಿಲಯಗಳಿರುವುದಾಗಿ ತಿಳಿಸಿದೆ.
ಉತ್ತರ ಪ್ರದೇಶದ ಬಳಿಕ ದಿಲ್ಲಿಯಲ್ಲಿ ನಕಲಿ ವಿಶ್ವವಿದ್ಯಾನಿಲಯಗಳು ಹೆಚ್ಚಾಗಿವೆ. ಯುಜಿಸಿ ಕಾಯ್ದೆಯ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ 24 ಸ್ವಯಂ ಘೋಷಿತ ವಿಶ್ವವಿದ್ಯಾನಿಲಯಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಈ ಅನಕೃತ ಶಿಕ್ಷಣ ಸಂಸ್ಥೆಗಳನ್ನು ನಕಲಿ ವಿಶ್ವವಿದ್ಯಾನಿಲಯಗಳೆಂದು ಘೋಷಿಸಲಾಗಿದ್ದು, ಇವುಗಳಿಗೆ ಯಾವುದೇ ಪದವಿ ನೀಡುವ ಅಕಾರ ನೀಡಲಾಗಿಲ್ಲ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಹೇಳಿದರು.