ದೇಶದಲ್ಲಿ ಕೊರೋನಾ ಆರ್ಭಟ: 24 ಗಂಟೆಯಲ್ಲಿ 4,987 ಮಂದಿಗೆ ವೈರಸ್​; 90 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

Varta Mitra News

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ ಕಟ್ಟುನಿಟ್ಟಿನ ಲಾಕ್​​ಡೌನ್​​​ ಆದೇಶದ ನಡುವೆಯೂ ಭಾರತದಲ್ಲಿ ಕೊರೋನಾ ವೈರಸ್ಆರ್ಭಟ ಮುಂದುವರಿದಿದೆ. ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 4,987 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 90,000 ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​​ ಬುಲೆಟಿನ್​​​​ನಲ್ಲಿ ಅಧಿಕೃತವಾಗಿ ತಿಳಿದು ಬಂದಿದೆ.

ಇನ್ನು, ಒಂದೇ ದಿನದಲ್ಲಿ ಮಾರಕ ಕೊರೋನಾಗೆ 120 ಮಂದಿ ಬಲಿಯಾದ ಪರಿಣಾಮ ಸಾವಿನ ಸಂಖ್ಯೆ 2,872ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರವೊಂದರಲ್ಲೇ 67 ಮಂದಿ ಸಾವಿಗೀಡಾಗಿದ್ದಾರೆ.  ಹೀಗಾಗಿ ಜನರಲ್ಲಿ ಕೊರೋನಾ ಭೀತಿ ಮತ್ತಷ್ಟು ಹೆಚ್ಚಾಗತೊಡಗಿದೆ.

ದೇಶಾದ್ಯಂತ ದಾಖಲಾದ ಒಟ್ಟು 90,927 ಸೋಂಕಿತರ ಪೈಕಿ ಮಹಾರಾಷ್ಟ್ರದಲ್ಲಿ 30 ಸಾವಿರ ಕೇಸುಗಳಿವೆ. ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಬಳಿಕ ಗುಜರಾತ್​​ನಲ್ಲಿ ಸೋಂಕಿತ ಸಂಖ್ಯೆ 10 ಸಾವಿರ ದಾಟಿದೆ.
ಈ ಮಧ್ಯೆ ಕೋವಿಡ್-19 ಪಿಡುಗನ್ನು ಕಟ್ಟಿಹಾಕುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂಬುದು ಸಾರ್ವಜನಿಕ ವಲಯದಿಂದಲೇ ಕೇಳಿ ಬಂದಿದೆ. ಈ ಬಗ್ಗೆ ಕೊರೋನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು ಸೇರಿದಂತೆ ಎಲ್ಲಾ ವಾರಿಯರ್ಸ್​ಗಳು ಕೂಡ ಹೆಮ್ಮೆ ಪಡುತ್ತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ